ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ : ಚಿಕ್ಕಬಳ್ಳಾಪುರದಲ್ಲಿ ಚರಿತ್ರೆ ಸೃಷ್ಟಿಸಿದ ಬಿಜೆಪಿ ( BJP created history in Chikkaballapur )
ಚಿಕ್ಕಬಳ್ಳಾಪುರ : ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಕೇಸರಿ ಪಡೆ ಮತ್ತೆ ಚರಿತ್ರೆ ಸೃಷ್ಟಿಸಿದೆ ( BJP created history in Chikkaballapur ). ಚಿಕ್ಕಬಳ್ಳಾಪುರ ನಗರ ಸಭೆ ಚುನಾವಣೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಬಣ ಮೇಲುಗೈ ಸಾಧಿಸಿದೆ.
ಆ ಮೂಲಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧಿಕಾರ ಹಿಡಿದಿದೆ.
ತಲೆಕೆಳಗಾದ ಕಾಂಗ್ರೆಸ್ ಲೆಕ್ಕಾಚಾರ
ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಬದ್ಧ ವೈರಿ ಕಾಂಗ್ರೆಸ್ ಗೆ ಡಿಚ್ಚಿ ಕೊಟ್ಟಿರುವ ಕೇಸರಿ ಪಡೆ, 31 ಸದಸ್ಯ ಬಲದ ನಗರಸಭೆಯಲ್ಲಿ 22 ಮತಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ : ರಾರಾ ಅಖಾಡದಲ್ಲಿ ಡಿ ಬಾಸ್ ಪ್ರಚಾರ : ಇದೆಲ್ಲಾ ವರ್ಕೌಟ್ ಆಗಲ್ಲ ಎಂದ ದಳಪತಿ
ಪಕ್ಷೇತರರು ಹಾಗೂ ಇತರ ಸದಸ್ಯ ಬಲದೊಂದಿಗೆ ಸುಧಾಕರ್ ಬಣ ಅಧಿಕಾರ ಹಿಡಿದಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ ಉಲ್ಟಾ ಆಗಿದೆ. ಅದರಲ್ಲೂ ಜೆಡಿಎಸ್ ಪಕ್ಷದ ಬೆಂಬಲದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ತೀವ್ರ ಮುಖಭಂಗ ಉಂಟಾಗಿದೆ.
ಶತಾಯಗತಾಯ ನಗರಸಭೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದ್ದ ಸುಧಾಕರ್, ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷ ಗಾದಿಗೆ ಕೂರಿಸಿ ನಗರಸಭೆ ಅಧಿಕಾರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವ ಕಾರ್ಯತಂತ್ರದಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಾರೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಗಡಿನಾಡಲ್ಲಿ ಬಿಜೆಪಿ ಚರಿತ್ರೆ ಸೃಷ್ಟಿಸಿದೆ.
ಇದನ್ನೂ ಓದಿ : ರಾರಾ..ಶಿರಾ ಅಖಾಡದಲ್ಲಿ ಬಂಡೆ, ಚೂರಿ..ಚೂರಿ ರಾಮಯ್ಯ ಸದ್ದು; ಹುಲಿಯಾ ಏಟು, ರಾಮ್ಲು ಎದ್ರೇಟು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel