ಈ ಬಾರಿಯ ದಸರಾ ವೇಳೆ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಬಿಜೆಪಿ ನಾಯಕ ಆರ್. ಅಶೋಕ್ ನೀಡಿದ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಇಂದು ಮಾಧ್ಯಮದೊಂದಿಗೆ ಮಾತನಾಡುತ್ತಾ, ಬಿಜೆಪಿಗರು ಯಾವಾಗಲೂ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಈ ಬಾರಿ ದಸರಾ ಉದ್ಘಾಟನೆ ನಾನೇ ಮಾಡುತ್ತೇನೆ ಎಂಬುದೇ ಸತ್ಯ, ಎಂದು ತಿರುಗೇಟು ನೀಡಿದರು.
ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವು ದಸರಾ ವೇಳೆಗೆ ಮುಖ್ಯಮಂತ್ರಿಯನ್ನು ಬದಲಾಯಿಸಲಿದೆ ಎಂಬ ವದಂತಿಗಳನ್ನು ಹರಡುತ್ತಿರುವುದನ್ನು ಖಂಡಿಸಿದ ಸಿದ್ದರಾಮಯ್ಯ, ನಿಮಗೆ ಅನಿಸುತ್ತದೆ ಅಲ್ವಾ? ನಾನೇ ದಸರಾ ಉದ್ಘಾಟನೆ ಮಾಡ್ತೀನಿ ಅನ್ನೋದಾಗಿ. ಹೌದು, ನಾನೇ ಮಾಡ್ತೀನಿ, ಎಂದು ಸ್ಪಷ್ಟವಾಗಿ ಹೇಳಿದರು.
ಅಷ್ಟೇ ಅಲ್ಲದೆ, ಬಿಜೆಪಿ ಮುಖಂಡ ಶ್ರೀರಾಮುಲು ಕುರಿತು ಕಿಡಿಕಾರಿದ ಸಿಎಂ, ಅವರು ಎಷ್ಟು ಬಾರಿ ಸೋತಿದ್ದಾರೆ. ಅವರ ಭವಿಷ್ಯ ಅವರಿಗೆ ಗೊತ್ತಿರಲಿಲ್ಲವೇ ಎಂದರು..








