ಶಿವಮೊಗ್ಗ: ನನ್ನ ಸ್ಪರ್ಧೆಯಿಂದಾಗಿ ಬಿಜೆಪಿಗೆ ಭಯ ಶುರುವಾಗಿದೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಕಡೆ ಮೋದಿ ಹವಾ ಇದ್ದರೂ ನನ್ನ ಕ್ಷೇತ್ರದಲ್ಲಿ ಯಾವ ಹವಾ ಕಾಣುತ್ತಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ವಾತಾವರಣವಿದೆ. ಕಳೆದ ಬಾರಿ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಗ್ಯಾರಂಟಿ ಯೋಜನೆಗಳು ನನ್ನನ್ನು ಕೈ ಹಿಡಿಯಲಿವೆ ಎಂದು ಹೇಳಿದ್ದಾರೆ.
ನನಗೆ ಜನರ ಜೊತೆ ಇರಲು ಇಷ್ಟ. ನನ್ನ ಎದುರಾಳಿ ಯಾರು ಎಂದು ಯೋಚನೆ ಮಾಡಲ್ಲ. ನಾನು ನನ್ನ ಪ್ರಚಾರ ಅಷ್ಟೇ ಮಾಡುತ್ತಿದ್ದೇನೆ. ನಾನು ವೀಕ್ ಅಭ್ಯರ್ಥಿ ಅಲ್ಲ. ನನ್ನ ಸ್ಪರ್ಧೆಯಿಂದ ಬಿಜೆಪಿಗೆ ಭಯ ಶುರುವಾಗಿದೆ. ಶಿವರಾಜ್ ಕುಮಾರ್ ಬೆಂಬಲ ನನಗೆ ಯಾವಾಗಲೂ ಇರುತ್ತದೆ ಎಂದು ಹೇಳಿದ್ದಾರೆ.
ಪ್ರಚಾರದ ಮಧ್ಯೆ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಕೆಲವು ಹೊತ್ತು ಸಮಯ ಕಳೆದಿದ್ದಾರೆ. ಏ.15 ರಂದು ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ.