BJP – ಕಾಂಗ್ರೆಸ್ ‘ಕೈ’ ಇಟ್ಟಲ್ಲೆಲ್ಲ ಹಗರಣಗಳ ಸರಪಳಿ
ಬೆಂಗಳೂರು : ಕಾಂಗ್ರೆಸ್ ‘ಕೈ‘ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ. ಆ ಸರಪಳಿಯ ಒಂದೊಂದು ಕೊಂಡಿಯಲ್ಲೂ ಒಬ್ಬೊಬ್ಬ ಕಾಂಗ್ರೆಸ್ ನಾಯಕರು ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಎಷ್ಟು ಆದ್ಯತೆ ನೀಡಿತ್ತು ಎಂದರೆ ದೇಶದ ಪ್ರಥಮ ಪ್ರಧಾನಿ ಅಧಿಕಾರಕ್ಕೇರಿದ ವರ್ಷದ ಒಳಗಾಗಿ ಸ್ವತಂತ್ರ ಭಾರತದ ಮೊದಲ ಹಗರಣ ನಡೆಸಿದ್ದರು. ಕಾಂಗ್ರೆಸ್ ‘ಕೈ‘ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ. ಆ ಸರಪಳಿಯ ಒಂದೊಂದು ಕೊಂಡಿಯಲ್ಲೂ ಒಬ್ಬೊಬ್ಬ ಕಾಂಗ್ರೆಸ್ ನಾಯಕರು ಸಿಲುಕಿಕೊಂಡಿದ್ದಾರೆ.
ನೆಹರೂ ಆದಿಯಾಗಿ ಇಂದಿರಾ, ರಾಜೀವ್, ಸೋನಿಯಾ, ರಾಹುಲ್ ಗಾಂಧಿಯವರೆಗಿನ ನಕಲಿ ಗಾಂಧಿಗಳು ಭ್ರಷ್ಟಾತಿ ಭ್ರಷ್ಟರಾಗಿದ್ದಾರೆ. ಹೀಗಿರುವಾಗ ಅವರ ಹಿಂಬಾಲಕರು ತಿಹಾರ್ ಜೈಲಿಗೆ ಹೋಗಿ ಬರುವುದರಲ್ಲಿ ಅಚ್ಚರಿಯಿಲ್ಲ. ಕಾಂಗ್ರೆಸ್ ಈಗ ಬೇಲ್ ಪಾರ್ಟಿಯಾಗಿದೆ, ಜಾಮೀನು ಕೈಯಲ್ಲಿ ಹಿಡಿದುಕೊಂಡೇ ಹೊರಗೆ ತಿರುಗಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ #PayHighCommand ಸರ್ಕಾರ ಎಂಬ ಖ್ಯಾತಿ ಪಡೆದಿತ್ತು. ಗೋವಿಂದ ರಾಜು ಡೈರಿಯಲ್ಲಿ ನಕಲಿ ಗಾಂಧಿ ಪರಿವಾರಕ್ಕೆ ಸಲ್ಲಿಸಲಾದ ಕಪ್ಪಕಾಣಿಕೆಯ ವಿವರ ದಾಖಲಾಗಿತ್ತು. ಕಾಂಗ್ರೆಸ್ಸಿಗರೇ, ನೀವು ಯಾವ ಮಾದರಿಯಲ್ಲಿ ಕಪ್ಪಕಾಣಿಕೆ ʼಪೇʼ ಮಾಡಿರುವುದು ಎಂದು ಪ್ರಶ್ನಿಸಿದೆ.