ಸೌಜನ್ಯ ಹತ್ಯೆ ಪ್ರಕರಣದ ಕುರಿತು ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆ ಜೋರಾಗಿದೆ. ಈ ಪ್ರಕರಣದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ಮೂಡಿಸುವಂತ ಹೇಳಿಕೆ ನೀಡಿದ್ದಾರೆ.
ಸೌಜನ್ಯ ಹಂತಕರ ಬಗ್ಗೆ ಮಾಹಿತಿಯನ್ನು ಬಿಜೆಪಿಯವರಿಗೆ ಈಗಾಗಲೇ ಗೊತ್ತಿದೆ. ಶಾಸಕ ಸುನಿಲ್ ಕುಮಾರ್‌ಗೂ ಈ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ನಳಿನ್ ಕುಮಾರ್ ಕಟೀಲ್ 2023ರಲ್ಲಿ ಸ್ವತಃ ಹೇಳಿದ್ದಾರೆ. ಆದ್ದರಿಂದ ಈ ಹೇಳಿಕೆಯನ್ನು ಪರಿಗಣಿಸಲೇಬೇಕು, ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೌಜನ್ಯ ಹತ್ಯೆ ಮಾಡಿದವರು ಯಾರೆಂಬ ಮಾಹಿತಿ ಇದ್ದೂ ಇಂದಿನವರೆಗೂ ಬಿಜೆಪಿಯವರು ಅದನ್ನು ರಹಸ್ಯವಾಗಿ ಇಟ್ಟುಕೊಂಡಿರುವುದೇಕೆ? ಈ ಕುರಿತು ಸ್ಪಷ್ಟನೆ ನೀಡುವುದು ವಿಪಕ್ಷದ ನೈತಿಕ ಹೊಣೆಗಾರಿಕೆ ಎಂದು ಅವರು ಗರಂ ಆಗಿ ಪ್ರಶ್ನಿಸಿದ್ದಾರೆ.
ಸರ್ಕಾರದ ನಿಲುವು:
ಸೌಜನ್ಯ ಹಂತಕರ ಬಗ್ಗೆ ಮಾಹಿತಿ ನೀಡುವ ಯಾವುದೇ ಬಿಜೆಪಿ ನಾಯಕರಿಗೆ ಸರ್ಕಾರ ಸಂಪೂರ್ಣ ರಕ್ಷಣೆ ಒದಗಿಸುತ್ತದೆ.ಇದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಖರ್ಗೆ ತಿಳಿಸಿದ್ದಾರೆ.








