ಗಣೇಶ ಚತುರ್ಥಿಗೆ ಶುಭಕೋರಿದ ಬಿಜೆಪಿ ನಾಯಕರು

1 min read

ಗಣೇಶ ಚತುರ್ಥಿಗೆ ಶುಭಕೋರಿದ ಬಿಜೆಪಿ ನಾಯಕರು

ಬೆಂಗಳೂರು : ಇಂದು ನಾಡಿನಾದ್ಯಂತ ಅತ್ಯಂತ ಸಡಗರದಿಂದ ಶ್ರೀ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿದೆ. ಕೊರೊನಾ ನಿಯಮಗಳ ಪಾಲನೆಯೊಂದಿಗೆ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗಣೇಶ ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ಶುಭಕೋರಿದ್ದಾರೆ.

“ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು.

Ganesh Chaturthi saaksha tv

ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಶುಭಕೋರಿದ್ದಾರೆ.

ಇನ್ನು ಬಿಎಸ್ ಯಡಿಯೂರಪ್ಪ, ನಾಡಿನ ಎಲ್ಲ ಭಕ್ತಜನರಿಗೆ ವಿನಾಯಕ ಚತುರ್ಥಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು.

ವಿಘ್ನನಿವಾರಕನಾದ ವಿಘ್ನೇಶ್ವರನ್ನು ನಾಡಿನ ಪ್ರಗತಿಗೆ ಎದುರಾಗುವ ಎಲ್ಲ ವಿಘ್ನಗಳನ್ನು ದೂರ ಮಾಡಲಿ, ಸಮಸ್ತ ಜನತೆಗೆ ಸುಖ, ಸಂತೋಷ, ಆರೋಗ್ಯ ಭಾಗ್ಯಗಳನ್ನು ಕೊಟ್ಟು ಸದಾ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd