Yatnal | ಸಿದ್ದರಾಮಯ್ಯ ಮುಸ್ಲಿಮರ ಬಂಧುಗಳು.. ಅವ್ರ ಬಗ್ಗೆ ನಾನ್ಯಾಕೆ ಮಾತನಾಡಲಿ
ವಿಜಯಪುರ : ಸಿದ್ದರಾಮಯ್ಯ ಮುಸ್ಲಿಮರ ಬಂಧುಗಳು, ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಿದ್ದರಾಮಯ್ಯ ಕೊಟ್ಟ ಪರಿಹಾರ ಹಣ ಮುಸ್ಲಿಂ ಮಹಿಳೆ ಎಸೆದ ವಿಚಾರವಾಗಿ ಮಾತನಾಡಿದ ಯತ್ನಾಳ್, ಸಿದ್ದರಾಮಯ್ಯ ಮುಸ್ಲಿಮರ ಬಂಧುಗಳು, ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ.
ಅವರಿಗೂ ಗೊತ್ತಾಗಿದೆ, ಪರಿಹಾರ ಕೊಟ್ಟು ಅಷ್ಟೇ ಒಗಿತಾರೆ ಅಂತ. ಶಾಶ್ವತವಾಗಿ ನಮಗೆ ಪರಿಹಾರ ಕೊಡಲ್ಲಂತ ಮುಸ್ಲಿಮರಿಗೆ ಗೊತ್ತಾಗಿದೆ ಎಂದು ನುಡಿದರು.
ಬಿಜೆಪಿಯವರು ಮುಸ್ಲಿಂ ಮಹಿಳೆಗೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಯತ್ನಾಳ್, ಬಿಜೆಪಿಯವರು ಯಾಕೆ ಕೊಡ್ತಾರೆ..? ರೊಕ್ಕ ಒಗೆದವರು ಬಿಜೆಪಿಯವರ ಮಾತು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ.
ಕೆರೂರು ಗಲಭೆ ಪ್ರಕರಣದಲ್ಲಿ ಬಿಜೆಪಿ ಸಚಿವರು, ಶಾಸಕರು ಕೇವಲ ಗಾಯಾಳು ಹಿಂದೂಗಳಿಗೆ ಭೇಟಿ-ಪರಿಹಾರ ಕೊಟ್ಟಿದ್ದಾರೆ ಎಂಬ ಮುಸ್ಲಿಂ ಮಹಿಳೆ ರಜ್ಮಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಹೌದು, ಹಿಂದೂಗಳಿಗೆ ಅನ್ಯಾಯ ಆಗಿದೆ. ಅದಕ್ಕೆ ಹಿಂದೂಗಳಿಗೆ ಪರಿಹಾರ ಕೊಟ್ಟಿದ್ದೀವಿ. ಏನು ಅಂಜಿಕೆಯೇನು ಅಂತ ಯತ್ನಾಳ್ ಸಮರ್ಥಿಸಿಕೊಂಡರು.