ಸಚಿವ ಸುಧಾಕರ್ ವಿರುದ್ಧ ಮತ್ತೆ ಸಿಡಿದ ರೇಣುಕಾಚಾರ್ಯ
ದಾವಣಗೆರೆ : ನೀವು ಒಳ್ಳೇ ಕೆಲಸ ಮಾಡಿದ್ದರೆ ಯಾಕೆ ನಿಮ್ಮ ಜವಾಬ್ದಾರಿಗಳನ್ನ ಬೇರೆಯವರಿಗೆ ಹಂಚಿಕೆ ಮಾಡ್ತಾ ಇದ್ವಿ, ನಿಮ್ಮ ಕೆಲಸದ ಬಗ್ಗೆ ನಿಮಗೆ ನೀವೇ ಮಾರ್ಕ್ಸ್ ಕೊಟ್ಕೊಳ್ಳಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತೆ ಕಿಡಿಕಾರಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಇಳಿವಯಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಚಿವರಿಗೆ ಏನಾಗಿದೆ, ಸಚಿವರುಗಳು ಸರ್ಕಾರ, ಪಕ್ಷ, ಮುಖ್ಯಮಂತ್ರಿಗಳಿಗೆ ವರ್ಚಸ್ಸು ತರುವ ಕೆಲಸ ಮಾಡಬೇಕು.
ಕೆಲಸ ಮಾಡ್ತಾ ಇದ್ದೀವಾ ಇಲ್ವಾ ಅಂತ ಸಚಿವರುಗಳು ಆತ್ಮವಲೋಕನ ಮಾಡಿಕೊಳ್ಳಬೇಕು. ಯಾರಿಗೆ ಯಾವ ಜವಾಬ್ದಾರಿ ಇದೆ ಅಂತ ನಾವಾಗಲಿ, ಮುಖ್ಯಮಂತ್ರಿ ಹೇಳೋದಲ್ಲ ,ಅವರೆ ಅರ್ಥ ಮಾಡಿಕೊಳ್ಳಬೇಕು ಎಂದು ಗುಡುಗಿದರು.
ಇನ್ನು ನೀವು ಒಳ್ಳೇ ಕೆಲಸ ಮಾಡಿದ್ದರೆ ಯಾಕೆ ನಿಮ್ಮ ಜವಾಬ್ದಾರಿಗಳನ್ನ ಬೇರೆಯವರಿಗೆ ಹಂಚಿಕೆ ಮಾಡ್ತಾ ಇದ್ವಿ, ನಿಮ್ಮ ಕೆಲಸದ ಬಗ್ಗೆ ನಿಮಗೆ ನೀವೇ ಮಾಕ್ರ್ಸ್ ಕೊಟ್ಕೊಳ್ಳಿ ಎಂದು ಹೆಸರು ಹೇಳದೇ ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.