ಬಿಜೆಪಿಯವರು ಸಮಯ ಸಾಧಕರು : ಹೆಚ್ಡಿಕೆ H D Kumaraswamy saaksha tv
ವಿಜಯಪುರ : ಬಿ.ಎಸ್.ಯಡಿಯೂರಪ್ಪ ಅವರು ಹಿಂದುತ್ವದ ಹೆಸರಲ್ಲಿ ರಾಜಕಾರಣ ಮಾಡ್ತಾರೆ.
ಮತ್ತೊಂದೆಡೆ ಮುಸ್ಲಿಮರು ನಮ್ಮ ಜೊತೆ ಬರಬೇಕು ಎನ್ನುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೇವಲ ರಾಜಕಾರಣಕ್ಕಾಗಿ ಹಿಂದುತ್ವದ ಹೆಸರು ಹೇಳುತ್ತಾರೆ.
ಮುಸ್ಲಿಮರನ್ನು ದೇಶದ ಹೊರಗಿಡಲು ಹೇಳುತ್ತಾರೆ. ಮತ್ತೊಂದಡೆ ಮುಸ್ಲಿಮರು ನಮ್ಮ ಜೊತೆಗೆ ಬರುವಂತೆ ಹೇಳುತ್ತಾರೆ ಎಂದರು.
ಇದೇ ವೇಳೇ ಬಿಜೆಪಿಯವರು ಸಮಯ ಸಾಧಕರು ಎಂದ ಹೆಚ್ ಡಿಕೆ, ಯಾವಾಗ ಏನು ಹೇಳಬೇಕು ಎಂದು ಬಿಜೆಪಿ ಅವರಿಗೆ ಗೊತ್ತಿದೆ.
ಬಿಜೆಪಿಯವರು ತಾವು ಹೇಳಿದ್ದ ಮಾತು ಮರೆತು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.