ಜನರ ಆರೋಗ್ಯದ ವಿಷಯ ಬಿಜೆಪಿಯ ಪ್ರಚಾರದ ಸರಕು : ಕಾಂಗ್ರೆಸ್ Congress saaksha tv
ಬೆಂಗಳೂರು : ಜನರ ಆರೋಗ್ಯದ ವಿಷಯವನ್ನೂ ಪ್ರಚಾರದ ಸರಕು ಮಾಡಿಕೊಂಡಿದ್ದಷ್ಟೇ ಬಿಜೆಪಿ ಸಾಧನೆ ಎಂದು ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಬಿಜೆಪಿ ದೇಶದಾದ್ಯಂತ ಲಸಿಕಾ ಕ್ಯಾಂಪ್ ಹಾಕಿಕೊಂಡು ದಾಖಲೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಮಾಡಿದರು.
ಇದಾದ ಬಳಿಕ ದೇಶದಲ್ಲಿ ಮತ್ತೆ ಕೊರೊನಾ ಲಸಿಕಾ ಅಭಿಯಾನ ಆಮೆಗತಿಯಲ್ಲಿ ನಡೆಯುತ್ತಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕುಟುಕಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಲಸಿಕೆ ಅಭಿಯಾನ ಕೇವಲ ಒಂದು ದಿನದ ಅಬ್ಬರವಾಗಿ ಮುಗಿದಿದೆ ಎಂದು ಟೀಕಿಸಿದೆ.
ಅಲ್ಲದೇ ಹುಟ್ಟುಹಬ್ಬದ ನಂತರ ರಾಜ್ಯದಲ್ಲಿ 90% ನಷ್ಟು ಲಸಿಕೆ ಹಂಚಿಕೆ ಕುಸಿತ ಕಂಡಿದೆ.
ಪ್ರಚಾರಕ್ಕಾಗಿ ಸತ್ತವರ ಹೆಸರಿನಲ್ಲಿಯೂ ಲಸಿಕೆ ನೀಡಿದ ವರದಿಗಳಿವೆ, ಜನರ ಆರೋಗ್ಯದ ವಿಷಯವನ್ನೂ ಪ್ರಚಾರದ ಸರಕು ಮಾಡಿಕೊಂಡಿದ್ದಷ್ಟೇ ಬಿಜೆಪಿ ಸಾಧನೆ ಎಂದು ಕಿಡಿಕಾರಿದೆ.









