ಚಾಮರಾಜನಗರ : ಬಿಆರ್ ಟಿ ಹುಲಿ ಅರಣ್ಯ ಪ್ರದೇಶದಲ್ಲಿ ಬ್ಲಾಕ್ ಪ್ಯಾಂಥರ್ ಪತ್ತೆಯಾಗಿದೆ. ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಕರಿಚಿರತೆ ಸಂಚರಿಸಿದ್ದು, ಬೈಲೂರು ಅರಣ್ಯ ವಲಯದಲ್ಲಿ ಕರಿಚಿರತೆ ನಡೆದು ಹೋಗುತ್ತಿರುವ ದೃಷ್ಯ ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಈ ಚಿರತೆ ಮಹದೇಶ್ವರ ವನ್ಯಜೀವಿ ಧಾಮದಿಂದ ಬಂದಿದೆಯೇ ಅಥವಾ ಬೇರೆ ಇನ್ನೆಲ್ಲಾದರೂ ಕರಿಚಿರತೆ ಇರುವ ಕುರಿತು ಪರಿಶೀಲಿಸಲಾಗುತ್ತಿದೆ. ಅಂದಾಜು 4 ವರ್ಷದ ಕರಿಚಿರತೆ ಇದಾಗಿದ್ದು ಚಾಮರಾಜನಗರದಲ್ಲೂ ಕರಿಚಿರತೆ ಇರುವುದು ಇದೀಗ ಖಾತ್ರಿಯಾಗಿದೆ. ಕರಿಚಿರತೆ ಪತ್ತೆಯಾಗಿರುವ ಬಗ್ಗೆ ಬಿಆರ್ ಟಿ ಡಿಸಿಎಫ್ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದು, ಯಾವ ವ್ಯಾಪ್ತಿಯಿಂದ ಬಂದಿದೆ ಎಂಬುದರ ಬಗ್ಗೆ ಇನ್ನೂ ತನಿಖಾ ಹಂತದಲ್ಲಿದೆ.
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ
ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...








