ದೇಶದಲ್ಲಿ ‘ಕರಿ ಮಾರಿ’ ಆತಂಕ : 4,332 ಬಲಿ –  4,332 ಸೋಂಕಿತರು..!

1 min read

ದೇಶದಲ್ಲಿ ‘ಕರಿ ಮಾರಿ’ ಆತಂಕ : 4,332 ಬಲಿ –  4,332 ಸೋಂಕಿತರು..!

ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಫಂಗಸ್ , ಯೆಲ್ಲೂ, ಹಸರು ಫಂಗಸ್ , ಡೆಲ್ಟಾ , ಲ್ಯಾಂಬ್ಡಾ , ಜಿಕಾ , ಕಪ್ಪಾ ವೈರಸ್ ಳ ಆಕಂತ ಜನರನ್ನ ಆತಂಕಕ್ಕೆ ಈಡು ಮಾಡಿದೆ.. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ನಡುವೆ  ದೇಶದಲ್ಲಿ ಇದುವರೆಗೆ ಒಟ್ಟು 45,374 ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ವರದಿಯಾಗಿವೆ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. 4,332 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವ ಡಾ. ಭಾರತಿ ಪ್ರವೀಣ್‌ ಪವಾರ್‌ ಉತ್ತರಿಸಿದ್ದಾರೆ. ಕಪ್ಪು ಶಿಲೀಂಧ್ರ ಸೋಂಕು ಹೊಸ ಕಾಯಿಲೆಯಲ್ಲ. ಆದರೂ, ಇದನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ-1897 ಅಡಿಯಲ್ಲಿ ಸೇರಿಸುವಂತೆ ರಾಜ್ಯಗಳು 2021ರ ಮೇನಲ್ಲಿ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸುವವರೆಗೆ ಹೆಚ್ಚಿನ ಗಮನ ಸೆಳೆದಿರಲಿಲ್ಲ ಎಂದಿದ್ದಾರೆ.

ಪತ್ನಿಯ ಬುರ್ಖಾ ಧರಿಸಿ, ವಿಮಾನ ಏರಿದ ಕೊರೊನಾ ಸೋಂಕಿತ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd