Black fungus ಬ್ಲಾಕ್ ಫಂಗಸ್ ಕಣ್ಣಿಗೆ ರೀಚ್ ಆದ್ರೆ ಕಣ್ಣು ತೆಗೆಯಲೇಬೇಕು : ಸುಧಾಕರ್
ಬೆಂಗಳೂರು : ಬ್ಲಾಕ್ ಫಂಗಸ್ ಕಣ್ಣಿಗೆ ರೀಚ್ ಆದ್ರೆ ಕಣ್ಣು ತೆಗೆಯಲೇಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬ್ಲಾಕ್ ಫಂಗಸ್ ನಿಂದ ಕಣ್ಣು ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬ್ಲಾಕ್ ಫಂಗಸ್ ಕಣ್ಣಿಗೆ ರೀಚ್ ಆದಮೇಲೆ, ಕಣ್ಣು ತೆಗೆಲೇಬೇಕಾಗುತ್ತದೆ.
ಅದು ಮಿದುಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಮೊದಲು ಡೆಂಟಲ್ ಪರೀಕ್ಷೆ ಮಾಡ್ತಾರೆ, ಬಳಿಕ ಕಣ್ಣಿನ ತಜ್ಞರು ಎಲ್ಲಾ ಸೇರಿ ಪರೀಕ್ಷೆ ಮಾಡ್ತಾರೆ.
ಔಷಧಿ 1300 ವಯಲ್ಸ್ ನೀಡಿದ್ದಾರೆ. ಆದರೆ ಅದು ಸಾಕಾಗಲ್ಲ. ನಮಗೆ ಅವಶ್ಯಕತೆ ಇದ್ದಷ್ಟು ಪೂರೈಕೆ ಆಗುತ್ತಿಲ್ಲ. ನಾನು ಸದಾನಂದ ಗೌಡರ ಜೊತೆ ಪ್ರತಿದಿನ ಮಾತಾಡ್ತಾ ಇದ್ದೇನೆ ಎಂದು ತಿಳಿಸಿದರು.
ಇನ್ನು ರಾಜ್ಯಕ್ಕೆ ಒಂದು ಲಕ್ಷ 86 ಸಾವಿರ ಡೋಸ್ ಕೋವ್ಯಾಕ್ಸಿನ್ ಬಂದಿದೆ. ರಾಜ್ಯದಲ್ಲಿ ಮೂರು ಲಕ್ಷ ಜನರಿಗೆ ಕೊಡಬೇಕು. ಎರಡನೇ ಡೋಸ್ ತೆಗೆದುಕೊಳ್ಳಲು ಸಹಾಯ ಆಗ್ತಿದೆ ಎಂದು ಮಾಹಿತಿ ನೀಡಿದರು.