BMRCL Consultant Recruitment 2025: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಬೆಂಗಳೂರು ನಗರದಲ್ಲಿ ಮೆಟ್ರೋ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಸ್ಥಾಪಿತವಾಗಿರುವ ವಿಶಿಷ್ಟ ಜಂಟಿ ಉಪಕ್ರಮ ಸಂಸ್ಥೆಯಾಗಿದೆ. ಇದರ Project Monitoring & Networking ವಿಭಾಗದಲ್ಲಿ ಸಲಹೆಗಾರ (Consultant) ಹುದ್ದೆಗೆ ಅರ್ಹ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗ ವಿವರಗಳು:
ಇಲಾಖೆ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
ಹುದ್ದೆಯ ಹೆಸರು: ಸಲಹೆಗಾರ (ಪ್ರಾಜೆಕ್ಟ್ ಮಾನಿಟರಿಂಗ್ & ನೆಟ್‌ವರ್ಕಿಂಗ್)
ಒಟ್ಟು ಹುದ್ದೆಗಳು: 01
ಅರ್ಜಿ ಸಲ್ಲಿಸುವ ಬಗೆ: ಆನ್‌ಲೈನ್ (ಅಂತಿಮ ಹಂತದಲ್ಲಿ ಹಾರ್ಡ್‌ಕಾಪಿ ಕೂರಿಯರ್ ಮೂಲಕ ಕಳುಹಿಸಬೇಕು)
ಉದ್ಯೋಗ ಸ್ಥಳ: ಬೆಂಗಳೂರು
ವಿದ್ಯಾರ್ಹತೆ ಮತ್ತು ಅನುಭವ
ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE/B.Tech ಪದವಿ ಹೊಂದಿರಬೇಕು.
ಎಂ.ಟೆಕ್ ಇದ್ದರೆ ಹೆಚ್ಚುವರಿ ಶ್ರೇಯಸ್ಕರ.
ಕನಿಷ್ಠ 9 ವರ್ಷಗಳ ಅನುಭವ ಕಡ್ಡಾಯ.
ಅನುಭವದ ಕ್ಷೇತ್ರಗಳು:
ಡ್ಯಾಶ್‌ಬೋರ್ಡ್ ಅಭಿವೃದ್ಧಿ ಮತ್ತು ಇಂಟಿಗ್ರೇಟೆಡ್ ಪ್ರಾಜೆಕ್ಟ್ ಮಾನಿಟರಿಂಗ್ ವ್ಯವಸ್ಥೆ (IPMS).
Critical Path Method ಆಧರಿಸಿ ಚಟುವಟಿಕೆಗಳ ಪ್ರಗತಿ ಗಮನದಲ್ಲಿ ಇಡುವುದು.
O&M ಘಟಕದ ಸಬ್ ಸಿಸ್ಟಂಗಳ ಡೇಟಾ ನಿರ್ವಹಣೆ.
Concept Papers ತಯಾರಿ ಮತ್ತು ಹೊಸ ಯೋಜನೆಗಳ ರೂಪುರೇಷೆ ಸಿದ್ಧತೆ.
ಸೈಬರ್ ಸೆಕ್ಯುರಿಟಿ ಪಾಲಿಸಿಗಳ ಜಾರಿಗೆ ಸಹಕಾರ.
ಡೇಟಾ ಕಲೆಕ್ಷನ್ ಹಾಗೂ ಸ್ಟಾಂಡರ್ಡೈಸೇಶನ್.
ಕನ್ನಡ ತಿಳಿದಿರುವುದು ಕಡ್ಡಾಯ!
ವಯೋಮಿತಿ
ಕನಿಷ್ಠ ವಯಸ್ಸು: 32 ವರ್ಷಗಳು
ಗರಿಷ್ಠ ವಯಸ್ಸು: 43 ವರ್ಷಗಳು
ವಯಸ್ಸಿನ ಲೆಕ್ಕಾಚಾರಕ್ಕೆ ಮಾನ್ಯ ದಿನಾಂಕ: 04-07-2025
ವಿನಾಯಿತಿ:
ಈ ಹುದ್ದೆಗೆ ಯಾವುದೇ ವರ್ಗೀಯ ವಯೋಮಿತಿ ವಿನಾಯಿತಿ ಇರುವುದಿಲ್ಲ. ಕಾರಣ – ಇದು ಗುತ್ತಿಗೆ ಆಧಾರಿತ ಅನುಭವ ಹುದ್ದೆಯಾಗಿದ್ದು ಸರ್ಕಾರದ ಸಾಮಾನ್ಯ ಮೀಸಲು ನಿಯಮ ಅನ್ವಯಿಸುವುದಿಲ್ಲ.
ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗೆ ₹ 1,06,250/- ಪ್ರತಿ ತಿಂಗಳು Consolidated Salary ನೀಡಲಾಗುತ್ತದೆ.
DA/HRA ಅಥವಾ ಯಾವುದೇ ಹೆಚ್ಚುವರಿ ಭತ್ಯೆಗಳು ಇಲ್ಲ.
ಗ್ರ್ಯಾಚ್ಯುಟಿ, ಲೀವ್ ಎನ್‌ಕ್ಯಾಶ್ಮೆಂಟ್, ಪಿಂಷನ್ ಇರಲ್ಲ – ಇದು ಶುದ್ಧವಾಗಿ ಗುತ್ತಿಗೆ Consolidated Pay.
ಟಿಪ್ಪಣಿ:
ವೇತನ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಿಸಲಾಗುತ್ತದೆ.
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ.
ಎಲ್ಲ ವರ್ಗಗಳಿಗೂ (ಸಾಮಾನ್ಯ, ಎಸ್ಸಿ/ಎಸ್ಟಿ, ಒಬಿಸಿ, ಅಂಗವಿಕಲ, ಮಾಜಿ ಸೈನಿಕ) ಅರ್ಜಿ ಶೂನ್ಯ.
ಪರೀಕ್ಷಾ ವಿಧಾನ
ಲಿಖಿತ ಪರೀಕ್ಷೆ, ಆನ್‌ಲೈನ್ ಪರೀಕ್ಷೆ ಇಲ್ಲ.
ಅರ್ಜಿ ಸಲ್ಲಿಕೆ ವಿಧಾನ:
ಆನ್‌ಲೈನ್ ಅರ್ಜಿ
BMRCL ಅಧಿಕೃತ ವೆಬ್‌ಸೈಟ್ www.bmrc.co.in → Career ಸೆಕ್ಷನ್‌ನಲ್ಲಿ ಅರ್ಜಿ ನಮೂನೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
III ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ,
ಶಾಂತಿನಗರ, ಬೆಂಗಳೂರು – 560027
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ: 04-07-2025
ಆನ್‌ಲೈನ್ ಅರ್ಜಿ ಕೊನೆ ದಿನಾಂಕ: 17-07-2025
ಹಾರ್ಡ್‌ಕಾಪಿ ಕಚೇರಿಗೆ ತಲುಪಲು ಕೊನೆ ದಿನಾಂಕ: 22-07-2025 ಸಂಜೆ 4:00








