‘ಇಲ್ಲಿ ಜನ ಸಾಯುತ್ತಿದ್ದಾರೆ – ನೀವು ಮಾಲ್ಡೀವ್ಸ್ ನಲ್ಲಿ ದುಡ್ಡು ಉಡಾಯಿಸುತ್ತಿದೀರಾ…. ನಾಚಿಕೆಯಾಗಬೇಕು’..!

1 min read

‘ಇಲ್ಲಿ ಜನ ಸಾಯುತ್ತಿದ್ದಾರೆ – ನೀವು ಮಾಲ್ಡೀವ್ಸ್ ನಲ್ಲಿ ದುಡ್ಡು ಉಡಾಯಿಸುತ್ತಿದೀರಾ…. ನಾಚಿಕೆಯಾಗಬೇಕು’..!

ಮುಂಬೈ : ಒಂದೆಡೆ ದೇಶದ ಜನರು ಕೊರೊನಾ ಹಾವಳಿಗೆ ಕಮಗಾಲಾಗಿದ್ದಾರೆ. ಬಡವರು ಊಟಕ್ಕೂ ಪರದಾಡುತ್ತಿದ್ದಾರೆ. ಸೋಂಕಿತರು ನರಳಿ ನರಳಿ ಸಾಯುತ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕ್ಯಾರೇ ಮಾಡದೇ ಇದು ನಮ್ಮ ದೇಶದ ವಿಚಾರ ಅಂತ ಗೊತ್ತಿದ್ರೂ ಸೋ ಕಾಲ್ಡ್ ಸೆಲೆಬ್ರಿಟಿಗಳು ಮಾತ್ರ ವಿದೇಶಕ್ಕೆ ಹಾರಿ ಮಜಾ ಮಾಡ್ತಿದ್ದಾರೆ. ಬಹುತೇಕರು ಮಾಲ್ಡೀವ್ಸ್ ಗೆ ಹೋಗಿದಾರೆ.

ದಿಸಾ ಪಟಾನಿ – ಟೈಗರ್ ಶ್ರಾಫ್ , ಸಾರಾ ಅಲಿ ಖಾನ್ , ಆಲಿಯಾ ಭಟ್ – ರಣಬೀರ್ ಕಪೂರ್ ಹೀಗೆ ಅನೇಕರು ಮಾಲ್ಡೀವ್ಸ್ ಗೆ ತೆರಳಿ ಮೋಜು ಮಸ್ತಿ ಮಾಡ್ತಿದ್ಧಾರೆ. ದುಡ್ಡನ್ನ ನೀರಿನಂತೆ ಪೋಲು ಮಾಡ್ತಿದ್ಧಾರೆ. ಇದು ಅನೇಕರನ್ನ ಕೆರಳಿಸಿದೆ. ಈ ಕುರಿತು ಬಾಲಿವುಡ್ನ ಖ್ಯಾತ ನಟ ನವಾಝುದ್ದೀನ್ ಸಿದ್ದಿಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವಿಹಾರಕ್ಕೆಂದು ಮಾಲ್ಡೀವ್ಸ್ಗೆ ತೆರಳಿದ ಕೆಲ ಸೆಲೆಬ್ರಿಟಿಗಳು ಮಾಲ್ಡಿವ್ಸ್ನ ಹೆಸರನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಅವರು ಪ್ರವಾಸೋದ್ಯಮದೊಂದಿಗೆ ಏನು ವ್ಯವಸ್ಥೆ ಮಾಡಿದ್ದಾರೋ ನನಗೆ ತಿಳಿದಿಲ್ಲ. ಆದರೆ ಮಾನವೀಯತೆಗಾಗಿಯಾದರೂ ನಿಮ್ಮ ವಿಹಾರಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಇಲ್ಲಿ ಎಲ್ಲಾ ಕಡೆಗಳಲ್ಲೂ ನೋವಿದೆ.

ಕೋವಿಡ್ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಒಂದಿಷ್ಟು ಹೃದಯವಂತಿಕೆಯಿರಲಿ. ಇಲ್ಲಿ ನರಳುತ್ತಿರುವವರನ್ನು ಅಪಹಾಸ್ಯ ಮಾಡದಿರಿ. ದೇಶವು ಆರ್ಥಿಕ ಬಿಕ್ಕಟ್ಟಿಗೊಳಗಾಗಿರುವಂತಹ ಸಂದರ್ಭದಲ್ಲಿ ಈ ಸೆಲೆಬ್ರಿಟಿಗಳು ತಮ್ಮ ವಿಹಾರದ ಚಿತ್ರಗಳನ್ನು ಪೋಸ್ಟ್ಮಾಡುತ್ತಿದ್ದಾರೆ. ಜನರ ಬಳಿ ತಿನ್ನಲು ಆಹಾರವಿಲ್ಲ. ನೀವು ಹಣವನ್ನು ನೀರಿನಂತೆ ಪೋಲು ಮಾಡುತ್ತಿದ್ದೀರಿ. ಒಂದಿಷ್ಟು ನಾಚಿಕೆಯಿರಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೊರೊನಾ ಹಾವಳಿ : ಭಾರತದ ನೆರವಿಗೆ ಧಾವಿಸಿದ ‘ವಿಶ್ವದ ದೊಡ್ಡಣ್ಣ’

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd