ಇಂಡೊನೇಷ್ಯಾದ ಕ್ಯಾಥೊಲಿಕ್ ಚರ್ಚ್ನಲ್ಲಿ ಆತ್ಮಾಹುತಿ ದಾಳಿ..!
ಇಂಡೊನೇಷ್ಯಾ: ಇಂಡೋನೇಷ್ಯಾದ ಸುಲಾವೆಸಿ ದ್ವೀಪದ ರೋಮನ್ ಕ್ಯಾಥೊಲಿಕ್ ಚರ್ಚ್ನಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚರ್ಚ್ ನಲ್ಲಿ ಸಾಮೂಹಿಕ ಪ್ರಯರ್ ನಡೆಯುತ್ತಿದ್ದ ವೇಳೆ ಈ ಘಟನೆ ಜರುಗಿದೆ.
ದಾಳಿ ವೇಳೆ ಚರ್ಚ್ ನಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಈ ವೇಳೆ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 9 ಮಂದಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಸುಲಾವೆಸಿ ಪ್ರಾಂತ್ಯದ ರಾಜಧಾನಿ ಮಕಸ್ಸರ್ ನಲ್ಲಿರುವ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಕೆಥಡ್ರಲ್ನ ಹೊರಭಾಗದಲ್ಲಿ ಮೋಟರ್ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಇನ್ನೂ ಇಂಡೋನೇಷ್ಯಾದಲ್ಲಿ ಇಂತಹ ದಾಳಿಗಳು ದಿನೇ ದಿನೇ ಹೆಚ್ಚಾಗ್ತಲೇ ಇದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಮಗಳ ಮೇಲೆ 5 ವರ್ಷಗಳ ಕಾಲ ತಂದೆಯಿಂದ ನಿರಂತರ ಅತ್ಯಾಚಾರ
ಅಲೆಮಾರಿ ಕುಟುಂಬದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ
ಸವರ್ಣಿಯರ ಕಿರುಕುಳ ತಾಳರಾರದೇ ಲೈವ್ ನಲ್ಲಿ ವಿಷ ಸೇವಿಸಿದ ದಲಿತ ಕುಟುಂಬ..!