ಮಗಳ ಮೇಲೆ 5 ವರ್ಷಗಳ ಕಾಲ ತಂದೆಯಿಂದ ನಿರಂತರ ಅತ್ಯಾಚಾರ
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಮಲತಂದೆಯೋರ್ವ 17 ವರ್ಷದ ತನ್ನ ಮಲ ಮಗಳ ಮೇಲೆ 5 ವರ್ಷಗಳ ಕಾಲ ಪದೇ ಪದೇ ಅತ್ಯಾಚಾರವೆಸಗಿರುವ ಘಟನೆ ಯೋಗಿ ರಾಜ್ಯ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಸಂತ್ರಸ್ತೆಯ ತಾಯಿ ಮೊದಲ ಪತಿಯನ್ನು ಬಿಟ್ಟು ಈತನೊಂದಿಗೆ 2ನೇ ವಿವಾಹವಾಗಿದ್ದಳು. ಈಕೆ 2ನೇ ಗಂಡನ ಜೊತೆ ತನ್ನ ಮಗಳೊಂದಿಗೆ ವಾಸವಾಗಿದ್ದಳು.
ಆದರೆ ಈ ಕಾಮುಕ ತನ್ನ ಮಲಮಗಳ ಮೇಲೆ ನಿರಂತರ 5 ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾನೆ. ಅಲ್ದೇ ಯಾರಿಗಾದ್ರೂ ಹೇಳಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಪ್ರಕಾಶ್ ಸಿಂಗ್ ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ.
ಆದರೆ ಈತನಿಂದ ಬೇಸತ್ತುಹೋಗಿದ್ದ ಅಪ್ರಾಪ್ತೆ ಈ ಬಗ್ಗೆ ಚೈಲ್ಡ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಿ ಸಹಾಯ ಕೇಳಿದ್ದಾಳೆ. ತಕ್ಷಣವೇ ಮನೆಗೆ ಬಂದಿರುವ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ ಆರೋಪಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಆದ್ರೆ ಈ ವಿಚಾರದ ಬಗ್ಗೆ ಮೊದಲೇ ಸುಳಿವು ಸಿಕ್ಕಿದ್ದ ಆರೋಪಿ ಪರಾರಿಯಾಗಿದ್ದು, ಆತನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.