ಅಲೆಮಾರಿ ಕುಟುಂಬದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ
ಹಾಸನ: ಪೋಷಕರೊಂದಿಗೆ ಮಲಗಿದ್ದ ಅಲೆಮಾರಿ ಕುಟುಂಬದ ಬಾಲಕಿಯನ್ನು ಕಾಮುಕನೊಬ್ಬ ಅಪಹರಿಸಿ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ಹಾಸನದಲ್ಲಿ ಬೆಳಕಿಗೆ ಬಂದಿದೆ.
ಹಾಸನ ನಗರ ಹೊಸ ಬಸ್ ನಿಲ್ದಾಣದ ಬಳಿ ಈ ಅಲೆಮಾರಿ ಕುಟುಂಬ ಬೀಡು ಬಿಟ್ಟಿತ್ತು. ರಾತ್ರಿ ಬಾಲಕಿ ತನ್ನ ತಂದೆ-ತಾಯಿ ಜೊತೆ ನಿದ್ರೆಗೆ ಜಾರಿದ್ದಳು. ಈ ವೇಳೆ ಕಾಮುಕನೊಬ್ಬ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ನಡೆಸಿದ್ದಾನೆ.
ಈ ದೃಶ್ಯ ಬಸ್ ನಿಲ್ದಾಣದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರೆ. ಸದ್ಯ ಬಾಲಕಿಯನ್ನ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.