ಬೆಂಗಳೂರಿನ 4 ಕಡೆ ಬಾಂಬ್ ಇಟ್ಟಿರುವುದಾಗಿ  ಇ-ಮೇಲೆ ಬೆದರಿಕೆ

1 min read

ಬೆಂಗಳೂರಿನ 4 ಕಡೆ ಬಾಂಬ್ ಇಟ್ಟಿರುವುದಾಗಿ  ಇ-ಮೇಲೆ ಬೆದರಿಕೆ

ಸಿಲಿಕಾನ್ ಸಿಟಿ  ಬೆಂಗಳೂರಿನ  ಪ್ರತಿಷ್ಠಿತ ನಾಲ್ಕು ಶಾಲೆಗಳಿಗೆ  ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪೋಷಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಬಂದಿರುವ   ಇ-ಮೇಲ್  ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅನಾಮಿಕ ಹೆಸರಿನಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.

ನಗರದ ಸೂಳಕುಂಟೆ ಬಳಿಯ ಡೆಲ್ಲಿ ಪಬ್ಲಿಕ್ ಶಾಲೆ ಮೇಲೂ ಬಂಬ್ ಬೆದರಿಕೆ ಇದ್ದು ಶಾಲೆಯ ಸುತ್ತ ಪೊಲೀಸರು ಜಮಾಯಿಸಿ ತನಿಖೆ ನಡೆಸುತ್ತಿದ್ದಾರೆ. ಶಾಲೆಯಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಬಾಂಬ್ ನಿಗ್ರಹ ದಳ ಶೋಧ ನಡೆಸುತ್ತಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬೆಂಗಳೂರಿನ ನಾಲ್ಕು ಶಾಲೆಗಳಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಒಡ್ಡಲಾಗಿದೆ. ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯನ್ನು ಹಾಕಲಾಗಿದೆ ಎಂಬುದಾಗಿ  ಮಾಹಿತಿ ನೀಡಿದ್ದಾರೆ. ಶಾಲೆಗಳಿಗೆ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಸೇರಿದಂತೆ ವಿವಿಧ ತಂಡವು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ.

bomb threat call to Bengaluru schools

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd