ಚಿನ್ನಸ್ವಾಮಿ ಅಂಗಳದಲ್ಲಿ ಕ್ರಿಕೆಟ್ ಆಡಿದ ಸಿಎಂ bommai saaksha tv
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲ ಹೊತ್ತು ಕ್ರಿಕೆಟ್ ಆಡಿದರು.
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್‍ಸಿಎ ವತಿಯಿಂದ ಯೂನಿಪೋಲ್ ಫ್ಲಡ್ ಲೈಟ್ ಟವರ್ ಉದ್ಘಾಟನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗಿಯಾದ ಯೂನಿಪೋಲ್ ಫ್ಲಡ್ ಲೈಟ್ ಟವರ್ ಉದ್ಘಾಟಿಸಿದ ಬಳಿಕ ಸಿಎಂ, ಹೊನಲು ಬೆಳಕಿನಲ್ಲಿ ಕ್ರಿಕೆಟ್ ಆಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ತಮ್ಮ ಬಾಲ್ಯ ನೆನಪುಗಳನ್ನು ಮೆಲುಕು ಹಾಕಿಕೊಂಡರು. ನಮ್ಮ ಚಿಕ್ಕಂದಿನಲ್ಲಿ ಎಸ್ ಡಿ ರಾಬಟ್ರ್ಸ್ ಬೌಲಿಂಗ್ ನೋಡುವುದೇ ನಮಗೆ ರೋಚಕ.
ಇಂಡಿಯಾ, ಪಾಕಿಸ್ತಾನ ಮ್ಯಾಚ್ ಆದಾಗ ನಾವೂ ಇಡೀ ರಾತ್ರಿ ಸೆಲೆಬ್ರೇಶನ್ ಮಾಡ್ತಿದ್ವಿ ಎಂದು ಬೊಮ್ಮಾಯಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ, ಸಚಿವ ಮುನಿರತ್ನ, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಭಾಗವಹಿಸಿದ್ದರು.