ಇದು ಅನ್ಯಾಯ.. ರಾಜಮೌಳಿ ವಿರುದ್ಧ ಬೋನಿ ಕಪೂರ್ ಗರಂ
ಎಸ್ ಎಸ್ ರಾಜಮೌಳಿ ನಿರ್ದೇಶನದ ರಾಮ್ ಚರಣ್, ಎನ್ ಟಿ ಆರ್ ಅಭಿನಯದ ರೌದ್ರಂ ರಣಂ ರುಧೀರಂ ಸಿನಿಮಾ ಅಕ್ಟೋಬರ್ 13ಕ್ಕೆ ರಿಲೀಸ್ ಆಗಲಿದೆ ಅನ್ನೋದು ತಿಳಿದಿರುವ ವಿಚಾರವೇ. ಆದ್ರೆ ಇದೇ ವಿಚಾರವಾಗಿ ನಿರ್ದೇಶಕ ರಾಜಮೌಳಿ ವಿರುದ್ಧ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಬೆಂಕಿಕಾರುತ್ತಿದ್ದಾರೆ.
ಕೊರೊನಾ ಹೊಡೆತಕ್ಕೆ ಚಿತ್ರರಂಗ ತತ್ತರಿಸಿ ಹೋಗಿದೆ. ಈ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಮುಂದೆ ಹೋದರೆ ಚೆನ್ನಾಗಿರುತ್ತದೆ ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ.
ಮುಖ್ಯವಾಗಿ ಸಿನಿಮಾಗಳ ರಿಲೀಸ್ ವಿಚಾರದಲ್ಲಿ ಒಮ್ಮತದಿಂದ ಇರಬೇಕಾದ ಅವಶ್ಯಕತೆಯಿದೆ. ಅಹಂಗೆ ಬಿದ್ದರೇ ನಿರ್ಮಾಪಕರಿಗೆ ನಷ್ಟ ಆಗುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಆದ್ರೆ ಬಾಹುಬಲಿ ಸಿನಿಮಾ ಮೂಲಕ ಭಾರತೀಯ ಸಿನಿಮಾ ತಾಕತ್ತನ್ನ ವಿಶ್ವಕ್ಕೆ ಪರಿಚಯಿಸಿದ ರಾಜಮೌಳಿ ಮಾತ್ರ ಇದಕ್ಕೆ ಭಿನ್ನವಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಭಾರಿ ಪ್ರತಿಷ್ಠಾತ್ಮಕವಾಗಿ ನಿರ್ಮಾಣವಾಗುತ್ತಿರುವ ತ್ರಿಬಲ್ ಆರ್ ಸಿನಿಮಾವನ್ನು ಅಕ್ಟೋಬರ್ 13 ರಂದು ರಿಲೀಸ್ ಮಾಡೋದಾಗಿ ಘೋಷಿಸಿ ರಾಜಮೌಳಿ ಅನ್ಯಾಯ ಮಾಡಿದ್ದಾರೆ ಎಂದು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಆರೋಪಗಳ ಸುರಿಮಳೆಗೈದಿದ್ದಾರೆ.
ಹೇಳಿಕೇಳಿ ರೌದ್ರಂ ರಣಂ ರುಧೀರಂ ಪ್ಯಾನ್ ಇಂಡಿಯಾ ಸಿನಿಮಾ. ಬರೋಬ್ಬರಿ 10 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಸಾಮಾನ್ಯವಾಗಿ ಇಂತಹ ಬಿಗ್ ಸಿನಿಮಾ ರಿಲೀಸ್ ಆಗುತ್ತಿರುವಾಗ ಬೇರೆ ಭಾಷೆಯ ಸಿನಿಮಾಗಳನ್ನ ರಿಲೀಸ್ ಮಾಡಲು ಯಾರು ಇಷ್ಟಪಡೋದಿಲ್ಲ.
ಆದರೆ, ಅಜಯ್ ದೇವ್‍ಗನ್ ಅಭಿನಯದ ‘ಮೈದಾನ್’ ಚಿತ್ರ ಅಕ್ಟೋಬರ್ 15 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕ ಬೋನಿ ಕಪೂರ್ ಕೆಲವು ದಿನಗಳ ಹಿಂದೆ ಘೋಷಿಸಿದ್ದರು.
ಅಜಯ್ ದೇವ್‍ಗನ್ ‘ಆರ್‍ಆರ್‍ಆರ್’ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ರಾಜಮೌಳಿ ಬಳಿ ದಸರಾಗೆ ನನ್ನ ಮೈದಾನ್ ಸಿನಿಮಾ ಕೂಡ ರಿಲೀಸ್ ಆಗಲಿದೆ.
ಒಂದು ಬಾರಿ ಬೋನಿ ಕಪೂರ್ ಜೊತೆ ಮಾತನಾಡಿ ಎಂದು ಅಜಯ್ ದೇವಗನ್ ಹೇಳಿದ್ದರಂತೆ. ಆದ್ರೆ ಇದಕ್ಕೆ ಕೇರ್ ಮಾಡದೇ ರಾಜಮೌಳಿ ಅಕ್ಟೋಬರ್ 13 ರಂದೇ ಆರ್ ಆರ್ ಆರ್ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಎಂದು ಸುದ್ದಿ ಹರಡಿದೆ.
ಇನ್ನು ಈ ಎರಡು ಸಿನಿಮಾಗಳ ಕ್ಲಾಷ್ ಬಗ್ಗೆ ಸಂದರ್ಶನ ಒಂದರಲ್ಲಿ ಬೋನಿ ಕಪೂರ್ ಮಾತನಾಡುತ್ತಾ, ನಾನು ತುಂಬಾ ಅಸಮಾಧಾನಗೊಂಡಿದ್ದೆ. ಇದು ಅನೈತಿಕ. ಆರು ತಿಂಗಳ ಹಿಂದೆ ‘ಮೈದಾನ್’ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದೇನೆ. ಉದ್ಯಮವನ್ನು ರಕ್ಷಿಸಬೇಕಾದ ಸಮಯದಲ್ಲಿ ರಾಜಮೌಳಿ ಈ ರೀತಿ ಮಾಡಿದ್ದು ಸರಿಯಲ್ಲ ಅಂತ ಗರಂ ಆಗಿದ್ದಾರೆ.
ಒಟ್ಟಾರೆ ಒಂದು ವೇಳೆ ದಸರಾ ಅಖಾಡದಲ್ಲಿ ಈ ಎರಡೂ ಸಿನಿಮಾಗಳು ರಿಲೀಸ್ ಆಗಿದ್ದೇ ಆದಲ್ಲಿ ಅಲ್ಲಿ ಇಬ್ಬರಲ್ಲಿ ಒಬ್ಬರಿಗೆ ನಷ್ಟ ಕಟ್ಟಿಟ್ಟಬುತ್ತಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel