ಇಂದಿನಿಂದ ರಾಜ್ಯಾದ್ಯಂತ ಬೃಹತ್ ಕೋವಿಡ್ ಬೂಸ್ಟರ್ ಡೋಸ್ ಅಭಿಯಾನ…
ಕೊರೋನಾ ಮುನ್ನೆಚ್ಚರಿಕೆ ಡೋಸ್ ಹೆಚ್ಚಿನ ಸಂಖ್ಯೆಯಲ್ಲಿ ನೀಡುವ ನಿಟ್ಟಿನಲ್ಲಿ ಶನಿವಾರದಿಂದ (ಜ.21) ರಾಜ್ಯ ಆರೋಗ್ಯ ಇಲಾಖೆಯು ಬೃಹತ್ ಲಸಿಕಾ ಅಭಿಯಾನ ಆಯೋಜಿಸಿದೆ.
ಕೊರೋನಾ ಮೂರನೇ ಅಲೆಯಲ್ಲಿ ಒಮಿಕ್ರಾನ್ ರೂಪಾಂತರ ಅಷ್ಟೇನು ಗಂಭೀರ ಪ್ರಭಾವ ಬೀರದ ಕಾರಣ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯುವ ಬಗ್ಗೆ ಆಸಕ್ತಿ ತೋರಲಿಲ್ಲ. ಸದ್ಯ ರಾಜ್ಯದಲ್ಲಿ ಶೇ.22 ಮಂದಿ ಮಾತ್ರ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡಿದ್ದಾರೆ. ನಾಲ್ಕನೇ ಅಲೆ ಆತಂಕದಿಂದ ಮುನ್ನೆಚ್ಚರಿಕೆ ಡೋಸ್ ಹೆಚ್ಚಿನ ಸಂಖ್ಯೆಯಲ್ಲಿ ನೀಡಲು ತಜ್ಞರು ಸೂಚಿಸಿದ್ದರು.
ಈ ಹಿನ್ನೆಲೆ ರಾಜ್ಯದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಈಗಾಗಲೇ 4 ಲಕ್ಷ ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಹೊಂದಿದೆ. ಸದ್ಯ ರಾಜ್ಯಕ್ಕೆ 8 ಲಕ್ಷ ಡೋಸ್ ಕೋವಿಶೀಲ್ಡ್ ಆಗಮಿಸುತ್ತಿದೆ ಎಂದು ಆರೋಗ್ಯ ಇಲಾಖೆಯು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬೇಡಿಕೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಲಸಿಕೆ ಕಳುಹಿಸಲಾಗಿದೆ.
ತಿಂಗಳಾಂತ್ಯದ ವೇಳೆಗೆ ಶೇ. 50 ಮುನ್ನೆಚ್ಚರಿಕೆ ಡೋಸ್ ವಿತರಿಸುವ ಗುರಿ ಹೊಂದಿದೆ. ಕೊರೋನಾ ಲಸಿಕೆ ಎರಡನೇ ಡೋಸ್ ಪಡೆದು ಆರು ತಿಂಗಳು ಪೂರೈಸಿದವರು ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತೆರಳಿ ಮುನ್ನೆಚ್ಚರಿಕೆ ಡೋಸ್ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Booster dose: Massive covid booster dose campaign across the state from today…








