ನವದೆಹಲಿ : ಟೀಂ ಇಂಡಿಯಾದ ಸ್ಟಾರ್ ಬೌಲರ್ ಮಹಮ್ಮದ್ ಶಮಿ ಮೂರು ಬಾರಿ ಆತ್ಮಹತ್ಯಗೆ ಮುಂದಾಗಿದ್ದರಂತೆ. ಈ ವಿಚಾರವನ್ನು ಭಾರತದ ಸ್ಟಾರ್ ಬ್ಯಾಟ್ ಮನ್ ರೋಹಿತ್ ಶರ್ಮ ಅವರೊಂದಿಗೆ ಇನ್ ಸ್ಟ್ರಾಗ್ರಾಂ ಚಾಟ್ ನಲ್ಲಿ ಶಮಿ ಬಹಿರಂಗಗೊಳಿಸಿದ್ದಾರೆ.
ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಭಾವನೆ ಮೂರು ಬಾರಿ ನನ್ನ ಮನಸ್ಸಿನಲ್ಲಿ ಸುಳಿದಾಡಿತ್ತು. ನಾವಿದ್ದ ಅಪಾರ್ಟ್ ಮೆಂಟ್ ನ 24ನೆ ಮಹಡಿಯಿಂದ ನಾನು ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬಹುದೆಂಬ ಆತಂಕದಿಂದ ಮನೆಯ ಸದಸ್ಯರು ನನ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು ಎಂಬ ಸಂಗತಿಯನ್ನು ಶಮಿ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ನನ್ನ ಕುಟುಂಬದಲ್ಲಿ ತುಂಬಾ ಸಮಸ್ಯೆ ಇತ್ತು. ನನ್ನ ಕ್ರಿಕೆಟ್ ವೃತ್ತಿಗೂ ಇದರಿಂದ ಅಡ್ಡಿಯಾಗಿತ್ತು. ಈ ಎಲ್ಲ ಕಾರಣಗಳಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮೂರು ಬಾರಿ ಯೋಚಿಸಿದ್ದೆ ಎಂದು ಶಮಿ ಹೇಳಿಕೊಂಡಿದ್ದಾರೆ.