ಬಾಕ್ಸಿಂಗ್ ಡೇ ಟೆಸ್ಟ್ : ಟೀಂ ಇಂಡಿಯಾ ಶೈನ್.. ಆಸೀಸ್ 143/5
ಮೆಲ್ಬರ್ನ್ : ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಎರಡನೇ ಟೆಸ್ಟ್ ಪಂದ್ಯ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲೇ ಕಾಂಗರೂಗಳಿಗೆ ಟೀಂ ಇಂಡಿಯಾ ಬೌಲರ್ ಗಳು ಶಾಕ್ ನೀಡಿದ್ದಾರೆ.
ಮೆಲ್ಬರ್ನ್ ಅಂಗಳದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ಆಸೀಸ್ ನಾಯಕ ಆರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದರು.
ವಿಶ್ವಾಸದಿಂದಲೇ ಬ್ಯಾಟಿಂಗ್ ಗೆ ಇಳಿದ ಆಸೀಸ್ ತಂಡಕ್ಕೆ ಭಾರತದ ಜಸ್ ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು.
ಜೋ ಬನ್ರ್ಸ್ ಅವರನ್ನು ಬೂಮ್ರಾ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು.
ಐತಿಹಾಸಿಕ ಶತಕದ ಪಂದ್ಯಕ್ಕೆ ಸಾಕ್ಷಿಯಾದ ಮೆಲ್ಬರ್ನ್ ಅಂಗಣ..!
ನಂತರ ದಾಳಿಗೆ ಬಂದ ಸ್ಪಿನ್ನರ್ ಅಶ್ವಿನ್ ಬ್ಯಾಕ್ ಟು ಬ್ಯಾಕ್ ಮ್ಯಾಥ್ಯೂ ವೇಡ್ (30) ಹಾಗೂ ಸ್ಟೀವ್ ಸ್ಮಿತ್ (0) ವಿಕೆಟ್ ಪಡೆದರು.
ಬೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಬುಮ್ರಾ ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಹೆಡ್ ಅವರನ್ನು 38 ಗಳಿದ್ದ ವೇಳೆ ಪೆವಿಲಿಯನ್ ದಾರಿ ತೋರಿಸಿದರು.
ಇದಾದ ಬಳಿಕ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಮೊಹಮದ್ ಸಿರಾಜ್ ಅವರು ಮಾರ್ನಸ್ ಲಬುಸ್ಚಾಗ್ನೆ (48) ವಿಕೆಟ್ ಪಡೆದರು. ಸದ್ಯ ಆಸ್ಟ್ರೇಲಿಯಾ 143 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿದೆ.
ಭಾರತದ ಪರ ಬೂಮ್ರಾ, ಅಶ್ವಿನ್ ತಲಾ 2 ವಿಕೆಟ್ ಪಡೆದಿದ್ದರೇ ಸಿರಾಜ್ ಒಂದು ವಿಕೆಟ್ ಕಿತ್ತಿದ್ದಾರೆ.
ಇತ್ತ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡದ ಸಾರಥ್ಯ ವಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









