Bihar | ಪ್ರೀತಿಸಿದ್ದಕ್ಕೆ ಯುವಕನನ್ನು ಕೊಂದ ತಂದೆ
ಬಿಹಾರದ ಪುರ್ನಿಯಾ ಎಂಬಲ್ಲಿ ಘಟನೆ
ಖುಷ್ಕಿಬಾಗ್ ಬಾಗೇಶ್ವರದ ಕುನಾಲ್ ಮೃತ ಯುವಕ
ಮುನ್ನಾ ಪಾಸ್ವನ್ ಕೊಲೆ ಆರೋಪಿ
ಬೈಕ್ ನಲ್ಲಿ ಬಂದು ಯುವಕನಿಗೆ ಗುಂಡೇಟು
ಬಿಹಾರ : ತನ್ನ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ತಂದೆ ಯುವಕನಿಗೆ ಗುಂಡು ಹಾರಿಸಿರುವ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ.
ಯುವಕನನ್ನು ಖುಷ್ಕಿಬಾಗ್ ಬಾಗೇಶ್ವರ ಕಾಲೋನಿಯ ಕುನಾಲ್ ಎಂದು ಗುರುತಿಸಲಾಗಿದೆ.
ಯುವಕ ಮನೆಗೆ ಹಿಂತಿರುಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಯುವಕನ ತೊಡೆಗೆ ಗುಂಡು ಹಾರಿಸಿದ್ದಾರೆ.

ತಕ್ಷಣ ಆತ ನೆಲಕ್ಕೆ ಬಿದ್ದಿದ್ದಾನೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಕುನಾಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಶೂಟ್ ಮಾಡಿದ ಒಬ್ಬರಲ್ಲಿ ತನ್ನ ಗೆಳತಿಯ ತಂದೆ ಮುನ್ನಾ ಪಾಸ್ವಾನ್ ಎಂದು ಯುವಕ ಆರೋಪಿಸಿದ್ದಾರೆ.
ಅಲ್ಲದೇ ಬೈಕ್ ನಲ್ಲಿ ಬಂದ ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಕುನಾಲ್ ತನ್ನ ದೂರಿನಲ್ಲಿ ತಿಳಿಸಿದ್ದಾನೆ.
ಅಂದಹಾಗೆ ಕಳೆದ ಕೆಲವು ದಿನಗಳಿಂದ ಯುವತಿಯ ತಂದೆ ಪಾಸ್ವಾನ್. ಕುನಾಲ್ ಅವರಿಗೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.