ಉತ್ತರ ಕೊರಿಯಾ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿಧನರಾಗಿದ್ದಾರೆ ಎನ್ನುವ ಊಹಾಪೋಹಗಳು ಹೆಚ್ಚಿದ ಬೆನ್ನಲ್ಲೆ, ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಕೊರಿಯಾದ ರಾಜಧಾನಿ ಪ್ಯಾಂಗ್ ಯಾಂಗ್ ಗೆ ಹತ್ತಿರದಲ್ಲಿರುವ ಸುನ್ ಚೊನ್ ನಲ್ಲಿ ನಿನ್ನೆ ಕಿಮ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು ಅಂತ ತಿಳಿದುಬಂದಿದೆ. ರಸಗೊಬ್ಬರ ಕಾರ್ಖಾನೆಯೊಂದನ್ನು ಅವರು ಉದ್ಧಾಟನೆ ಮಾಡಿದ್ದಾರೆ ಅಂತಾ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
Kim Jong Un was at the fertiliser plant today with a number of officials, including his sister pic.twitter.com/QHC9GAf2hy
— Jack Posobiec 🇺🇸 (@JackPosobiec) May 2, 2020
ಏಪ್ರಿಲ್ 11ರಂದು ಕಿಮ್ ವರ್ಕರ್ಸ್ ಪಾರ್ಟಿ ಪೊಲಿಟ್ ಬ್ಯೂರೋದ ಸಭೆಯಲ್ಲಿ ಭಾಗಿಯಾಗಿದ್ದರು. ಅದಾದ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅವರ ಆರೋಗ್ಯ ಚಿಂತಾಜನಕವಾಗಿದೆ, ಬಹುಶಃ ಅವರು ನಿಧನರಾಗಿರಬಹುದು ಅನ್ನೋ ವದಂತಿ ವಿಶ್ವದಾದ್ಯಂತ ಹರಡಿತ್ತು. ಅನಂತರ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರ ಭದ್ರತಾ ಸಲಹೆಗಾರ ಮೂನ್ ಚಂಗ್ ಇನ್ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಿಮ್ ಜೀವಂತವಾಗಿದ್ದಾರೆ ಅಂತ ಸ್ಪಷ್ಟಪಡಿಸಿದ್ದರು.
Kim Jong Un appears in public amid health rumors pic.twitter.com/EOdPwseVZq
— Jack Posobiec 🇺🇸 (@JackPosobiec) May 2, 2020
ನಿನ್ನೆ ಕಾರ್ಯಕ್ರಮಕ್ಕೆ ಕಿಮ್ ಆಗಮಿಸಿದಾಗ, ಎಲ್ಲರೂ ಜೋರಾದ ಚಪ್ಪಾಳೆ ಹಾಗೂ ಹರ್ಷೋದ್ಘಾರದೊಂದಿಗೆ ಸ್ವಾಗತ ಮಾಡಿದ್ದಾರಂತೆ.