ಸಹೋದ್ಯೋಗಿಗೆ ಕಿಸ್ ಕೊಟ್ಟು ಕೆಲಸ ಕಳೆದುಕೊಂಡ ಬ್ರಿಟನ್ ಆರೋಗ್ಯ ಸಚಿವ..!
ಲಂಡನ್ : ಬ್ರಿಟನ್ ಆರೋಗ್ಯ ಸಚಿವರೊಬ್ಬರು ತಮ್ಮ ಸಹೋದ್ಯೋಗಿಗೆ ಕಚೇರಿಯಲ್ಲಿಯೇ ಕಿಸ್ ಕೊಟ್ಟ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ಮ್ಯಾಟ್ ಹಾನ್‌ಕಾಕ್ ಸಹೋದ್ಯೋಗಿಗೆ ಕಚೇರಿಯಲ್ಲೇ ಮುತ್ತಿಟ್ಟು ಶಿಷ್ಟಾಚಾರ ಮರೆಯುವ ಜೊತೆಗೆ ಕೋವಿಡ್ ನಿಯಮವನ್ನೂ ಉಲ್ಲಂಘನೆ ಮಾಡಿದ್ದಾರೆ.
ಇದೇ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ವಿಚಿತ್ರ ಎಂದ್ರೆ ಎಲ್ಲರ ಎದುರು ಕಿಸ್ ಮಾಡಿದ್ದನ್ನ ತಪ್ಪು ಎನ್ನಲಾಗಿಲ್ಲ , ಬದಲಾಗಿ ಕರೊನಾ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಈ ಶಿಕ್ಷೆ ವಿಧಿಸಲಾಗಿದೆ.. ಹೌದು.. ಆರೋಗ್ಯ ಸಚಿವರಾಗಿದ್ದ ಕೊಂಡವರೇ ಕರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರಿಂದ ರಾಜೀನಾಮೆ ಪಡೆಯಲಾಗಿದೆ.
ಇನ್ನೂ ಸಚಿವರು ಕಿಸ್ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.. ಇನ್ನೂ ಇವರಿಂದ ತೆರವಾಗಿರುವ ಜಾಗಕ್ಕೆ ಪಾಕಿಸ್ತಾನದ ಸಂಸತ್ ಸದಸ್ಯ ಸಾಜಿದ್ ಜಾವಿದ್ ಬ್ರಿಟನ್ ನೂತನ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ…