ಅಕ್ಕನಿಗೆ ಹೆರಿಗೆ – ಸಹೋದರಿ ನೋಡಲು ಹೋದ ತಂಗಿ ಮೇಲೆ ಭಾವನಿಂದ ಅತ್ಯಾಚಾರ..!
ರಾಜಸ್ಥಾನ : ಹೆರಿಗೆಯಾದ ತನ್ನ ಸಹೋದರಿಗೆ ಸಹಾಯ ಮಾಡಲೆಂದು ಅಕ್ಕನ ಮೆನೆಗೆ ಹೋಗಿದ್ದ ತಂಗಿಯ ಮೇಲೆ ಭಾವನೇ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಭಾರತ್ ಪುರದಲ್ಲಿ ಬೆಳಕಿಗೆ ಬಂದಿದೆ.. ತನ್ನ ಅಕ್ಕನನ್ನ ನೋಡಿಕೊಳ್ಳಲು ಹೋಗಿದ್ದ 21 ವರ್ಷದ ಯುವತಿಯ ಮೇಲೆ ಆಕೆಯ ಭಾವ ಕಾಮಪಿಶಾಚಿಯಂತೆ ಎರಗಿಬಿದ್ದಿದ್ದಾನೆ..
ನಾದಿನಿಗೆ ಟೀ ಮಾಡಿ ಕೊಡುವ ನೆಪದಲ್ಲಿ ಚಹಾಕ್ಕೆ ಮತ್ತು ನಿದ್ರೆ ಬರಿಸುವ ಔಷಧ ಹಾಕಿ ಕುಡಿಸಿದ್ದಾನೆ. ನಂತರ ಆಕೆಯನ್ನು ರೇಪ್ ಮಾಡಿದ್ದಾನೆ. ಎಚ್ಚರವಾದ ಬಳಿಕ ಸತ್ಯ ಅರಿತ ಯುವತಿ ಈ ವಿಚಾರವನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾಳೆ.. ಬಳಿಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಭಾವನ ವಿರುದ್ಧ ದೂರು ದಾಖಲಿಸಿದ್ದಾಳೆ.. ಪ್ರಕರಣ ದಾಖಲಿಸಿಕೊಮಡಿರುವ ಪೊಲೀಸರು ಯುವತಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.