ಡಾ. ನೀರಜ್ ಅವರ ಫಾರ್ಮ್ ಹೌಸ್ ನಲ್ಲಿ ಇಂದೇ ಬಿ ಎಸ್ ವೈ ಮೊಮ್ಮಗಳ ಅಂತ್ಯಕ್ರಿಯೆ..
ಮಾಜಿ ಸಿ ಎಂ ಯಡಿಯೂರಪ್ಪನವರ ಮೊಮ್ಮಗಳು ಸೌಂದರ್ಯ ಅವರ ಅಂತ್ಯಕ್ರಿಯೆಯನ್ನ ಪತಿ ಡಾ ನೀರಜ್ ಅವರಿಗೆ ಸೇರಿದ ಸೋಲದೇವನಹಳ್ಳಿ ಬಳಿ ಇರುವ ಕಲ್ಪವೃಕ್ಷ ಫಾರ್ಮ್ ಹೌಸ್ ನಲ್ಲಿ ಇಂದು ಸಂಜೆಯೊಳಗೆ ನಡೆಸಲು ಕುಟುಂಬದವರು ಸಿದ್ಧತೆ ನಡೆಸಿದ್ದಾರೆ.
ಅಂತ್ಯಕ್ರಿಯೇ ನಡಸುವ ಫಾರ್ಮ್ ಹೌಸ್ ಗೆ ಬಿಗಿ ಭದ್ರತೆ ಕೈ ಗೊಳ್ಳಲಾಗಿದೆ. ಪಾರ್ಥೀವ ಶರೀರದ ವಿಕ್ಷಣೆಗೆ ಬಂದ ಸೋಲದೇವನ ಹಳ್ಳಿ ಗ್ರಾಮಸ್ಥರ ವಿಕ್ಷಣೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ..
ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು ಶಿವಗಂಗೆಯಿಂದ ಬರುತ್ತಿರುವ ಸ್ವಾಮಿಜಿಯವರು ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಲಿದ್ದಾರೆ..