ಸ್ಯಾಂಡಲ್ವುಡ್ನ ಯುವ ನಟ ಬಂಧನ
ಬೆಂಗಳೂರಿನ ಉದ್ಯಮಿಗೆ ಹನಿಟ್ರ್ಯಾಪ್
ಹಲಸೂರ್ ಗೇಟ್ ಪೊಲೀಸರಿಂದ ಬಂಧನ
ಯುವರಾಜ್ ಬಂಧಿತ ಯುವ ನಟ
ಯುವತಿಯರ ಹೆಸರಲ್ಲಿ ಚಾಟಿಂಗ್
ಬೆಂಗಳೂರು : ಹನಿ ಟ್ರ್ಯಾಪ್ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನ ಯುವ ನಟರೊಬ್ಬರನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಟ ಯುವರಾಜ್ ಬಂಧಿತ ಆರೋಪಿಯಾಗಿದ್ದಾರೆ. ಇವರು ಮಿಸ್ಟರ್ ಭೀಮರಾವ್ ಸಿನಿಮಾದ ನಾಯಕ ನಟರಾಗಿದ್ದಾರೆ.
ಯುವರಾಜ್ , ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯಬ್ಬರಿಗೆ ಯುವತಿಯರ ಹೆಸರಲ್ಲಿ ಚಾಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ.
ಇದರ ಆರೋಪದಡಿ ಯುವರಾಜ್ ಅವರನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಯುವತಿಯರ ಹೆಸರನ್ನು ಬಳಿಸಿಕೊಂಡು ಉದ್ಯಮಿ ಜೊತೆ ಚಾಟ್ ಮಾಡಿದ್ದ ಯುವರಾಜ್, ಬಳಿಕ ಉದ್ಯಮಿಯನ್ನ ಭೇಟಿಯಾಗಿ ನೀವು ಯುವತಿಯರ ಜೊತೆ ಅಶ್ಲೀಲ ಚಾಟ್ ಮಾಡಿರುವ ಬಗ್ಗೆ ಕೇಸ್ ದಾಖಲಾಗಿದೆ..

ಈ ಕೇಸ್ ಯಿಂದ ನಿಮ್ಮನ್ನ ಕೈಬಿಡಬೇಕಾಗಿದ್ದರೇ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದರಂತೆ.
ಇದಕ್ಕೆ ಹೆದರಿದ್ದ ಉದ್ಯಮಿ ಆರಂಭದಲ್ಲಿ ಐವತ್ತು ಸಾವಿರ ರೂಪಾಯಿ ಕೊಟ್ಟಿದ್ದರಂತೆ.
ಇದಾದ ಬಳಿಕ ಮೂರು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಹೀಗೆ ಹಂತ ಹಂತವಾಗಿ ಒಟ್ಟು 14 ಲಕ್ಷಕ್ಕೂ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದರಂತೆ.
ಈ ಸಂಬಂಧ ಉದ್ಯಮಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.