Bull Enters Rally: ಅಶೋಕ್ ಗ್ಲೇಹೋಟ್ ಭಾಷಣದ ವೇಳೆ ಸಮಾವೇಶಕ್ಕೆ ನುಗ್ಗಿದ ಗೂಳಿ…
ಗುಜರಾತ್ ಮೆಹ್ಸಾನಾದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ರಾಜಸ್ಥಾನದ ಸಿ ಎಂ ಅಶೋಕ್ ಗ್ಲೇಹೋಟ್ ಮಾತನಾಡುವ ವೇಳೆ ಗೂಳಿಯೊಂದು ನುಗ್ಗಿದ ಘಟನೆ ನಡೆದಿದೆ.
ಇದನ್ನೂ ರಾಜಕೀಯಕ್ಕೆ ಬಳಿಸಿಕೊಂಡ ರಾಜಸ್ಥಾನದ ಸಿ ಎಂ “ನಾನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ ಕಾಂಗ್ರೆಸ್ ಸಭೆ ನಡೆಸಿದಾಗಲೆಲ್ಲ ಬಿಜೆಪಿಯವರು ಗೂಳಿ ಮತ್ತು ಹಸುಗಳನ್ನ ಬಿಡುತ್ತಾರೆ” ಎಂದು ಹೇಳಿದ್ದಾರೆ. ಸೋಮವಾರ ನಡೆದ ಘಟನೆಯ ವಿಡಿಯೋ ಮಂಗಳವಾರ ವೈರಲ್ ಆಗಿದೆ.
An #uninvited_guest enters #Ashok_Gehlot‘s election rally in #Gujarat; Gehlot blames Bull belongs to #BJP.☺️☺️☺️☺️☺️☺️☺️ pic.twitter.com/TCzFXzd1pj
— Siva Subramaniya Sharma (@Lalgudiyan) November 29, 2022
ಸಭೆಗೆ ಅಡ್ಡಿಪಡಿಸಲು ಬಿಜೆಪಿ ಈ ಗೂಳಿಯನ್ನು ಕಳುಹಿಸಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಭೆಗೆ ಭಂಗ ತರಲು ಇಂತಹ ತಂತ್ರಗಳನ್ನು ಅನುಸರಿಸಲಿದೆ. ಗೂಳಿ ಸಭೆಗೆ ಪ್ರವೇಶಿಸುತ್ತಿದ್ದಂತೆಯೇ ಭಯಬೀತರಾದ ಜನರು ತಪ್ಪಿಸುಕೊಳ್ಳುವುದನ್ನ ವಿಡಿಯೋದಲ್ಲಿ ನೋಡಬಹುದು.
ನಂತರ ಸೆಕ್ಯೂರಿಟಿ ಗಾರ್ಡ್ ಗಳು ಗೂಳಿಯನ್ನ ಸಮಾವೇಶದಿಂದ ಹೊರಕರೆತರುವಲ್ಲಿ ಯಶಸ್ವಿಯಾಗಿದ್ದಾರೆ..
Bull Enters Rally in Gujarat During Ashok Gehlot’s Speech, Party Blames BJP