ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ನ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದಾರೆ. ಅವರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬುಲೆಟ್ ಪ್ರಕಾಶ್ ಸಾವನ್ನಪ್ಪಿದ್ದಾರೆ.
ಕೊನೆಗೂ ಈಡೇರಲಿಲ್ಲ ಆ ಕನಸು!
ಬುಲೆಟ್ ಪ್ರಕಾಶ್ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಇವೆಲ್ಲದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಬುಲೆಟ್ ಪ್ರಕಾಶ್ ಕಂಡಿದ್ದ ಆ ಕನಸು ಮಾತ್ರ ಕೊನೆಗೂ ಈಡೇರಲಿಲ್ಲ. ಹೌದು..! ಬುಲೆಟ್ ಪ್ರಕಾಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಒಂದು ಕನಸು ಕಂಡಿದ್ದರು. ಅದುವೇ ದರ್ಶನ್ ಜೊತೆ ಸಿನಿಮಾ ಮಾಡಬೇಕೆಂದು. ಅಂದರೆ ಬುಲೆಟ್ ಪ್ರಕಾಶ್ ತಮ್ಮ ಬ್ಯಾನರ್ ನಲ್ಲಿ ದರ್ಶನ್ ಜೊತೆ ಸಿನಿಮಾ ಮಾಡಬೇಕೆಂದು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು.
ಈ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಬುಲೆಟ್ ಪ್ರಕಾಶ್ ಅವರು ಹೇಳಿಕೊಂಡಿದ್ದರು, ಅದಕ್ಕಾಗಿ ಅವರು ಕಾಯುತ್ತಿದ್ದರು ಕೂಡ. ಆದರೆ ಪದೇ ಪದೇ ಅವರ ಆರೋಗ್ಯದಲ್ಲಿ ಕೈಕೊಡುತ್ತಿದ್ದ ಕಾರಣ ಕೊನೆಗೂ ಬುಲೆಟ್ ಪ್ರಕಾಶ್ ಅವರ ಕನಸು ಈಡೇರಲೇ ಇಲ್ಲ. ಇದೀಗ ಬುಲೆಟ್ ಪ್ರಕಾಶ್ ಅವರು ಇಹಲೋಕ ತ್ಯಜಿಸಿದ್ದು, ಅವರ ಕನಸು ಕನಸಾಗಿಯೇ ಉಳಿದಿದೆ.








