`ಬೂಮ್ರಾ, ಸಿರಾಜ್’ ಗೆ ಆಸ್ಟ್ರೇಲಿಯನ್ನರಿಂದ ಜನಾಂಗೀಯ ನಿಂದನೆ..!
ಸಿಡ್ನಿ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ಬೌಲರ್ ಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಸಿಡ್ನಿ ಅಂಗಳದಲ್ಲಿ ನೆರೆದಿರುವ ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಬಿಸಿಸಿಐ ಆರೋಪ ಮಾಡಿದೆ.
ಈ ಕುರಿತು ಐಸಿಸಿ ಮತ್ತು ಸ್ಟೇಡಿಯಂ ಅಧಿಕಾರಿಗಳು ಬುಮ್ರಾ, ಸಿರಾಜ್ ಮತ್ತು ಭಾರತ ತಂಡದ ನಿರ್ವಹಣೆ ಮಂಡಳಿಯ ಜೊತೆ 3ನೇ ದಿನದ ಪಂದ್ಯದಂತ್ಯಕ್ಕೆ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ ಆಸ್ಟ್ರೇಲಿಯನ್ ಪತ್ರಿಕೆ ದ ಡೈಲಿ ಟೆಲಿಗ್ರಾಫ್ ನಲ್ಲಿ ” ಕಳೆದ ಎರಡು ದಿನಗಳಿಂದ ಬುಮ್ರಾ – ಸಿರಾಜ್ ಅವರನ್ನು ಪಂದ್ಯ ವೀಕ್ಷಣೆಗೆ ಬರುತ್ತಿರುವ ಸಾರ್ವಜನಿಕರು ಜನಾಂಗೀಯವಾಗಿ ನಿಂದಿಸುತ್ತಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಪಂದ್ಯದಲ್ಲಿ ಬೊಂಬಾಟ್ ಸ್ಪೆಲ್ ಮಾಡುತ್ತಿರುವ ಸಿರಾಜ್ – ಬೂಮ್ರಾ ಅವರನ್ನು ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದಾರಂತೆ. ಸಿರಾಜ್ ಫೈನ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಪ್ರೇಕ್ಷಕರಿಂದ ನಿಂದನೆಗೊಳಗಾದರೆ, ಬುಮ್ರಾ ಔಟ್ ಫೀಲ್ಡ್ ನಲ್ಲಿ ನಿಂತಿದ್ದ ವೇಳೆ ಕೆಲವು ಪ್ರೇಕ್ಷಕರು ಅವಾಚ್ಯ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಂದಹಾಘೆ 2008ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ ತಂಡದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ತಮ್ಮನ್ನು ಮಂಗ ಎಂದು ಕರೆದು ನಿಂದನೆ ಮಾಡಿದ್ದಾರೆಂದು ಆಸ್ಟ್ರೇಲಿಯನ್ ಆಂಡ್ರ್ಯೂ ಸೈಮಂಡ್ಸ್ ಆರೋಪಿಸಿದ್ದರು. ಆದರೆ ಇದನ್ನು ಭಾರತ ತಂಡ ತಳ್ಳಿ ಹಾಕಿದ್ದು ಅಲ್ಲದೇ ಇಡೀ ತಂಡ ಭಜ್ಜಿ ಬೆನ್ನಿಗೆ ನಿಂತಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel