ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದಿದೆ. 106 ರನ್ಗಳಿಂದ ಗೆದ್ದು ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ.
ಭಾರತದ ಗೆಲುವಿನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಕೊಡುಗೆ ದೊಡ್ಡದಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಜೈಸ್ವಾಲ್ ದ್ವಿಶತಕ ಸಿಡಿಸಿದ್ದರೆ, ಗಿಲ್ ಎರಡನೇ ಇನ್ನಿಂಗ್ಸ್ನಲ್ಲಿ ಶತಕದ ಇನ್ನಿಂಗ್ಸ್ ಆಡಿದರು. ಜಸ್ಪ್ರೀತ್ ಬುಮ್ರಾ ಕೂಡ ಗೆಲುವಿಗೆ ಎರಡೂ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ತೋರಿದರು.
ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದರು. ಬುಮ್ರಾ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್, ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದರು. ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಬುಮ್ರಾ 91 ರನ್ ನೀಡಿ 9 ವಿಕೆಟ್ ಪಡೆದರು. ಇದು ಇಂಗ್ಲೆಂಡ್ ವಿರುದ್ಧ ಅವರ ಅತ್ಯುತ್ತಮ ಅಂಕಿ ಅಂಶಗಳಾಗಿವೆ. 2023ರಲ್ಲಿ ಇಂಗ್ಲೆಂಡ್ ವಿರುದ್ಧ 110 ರನ್ಗಳಿಗೆ 9 ವಿಕೆಟ್ಗಳನ್ನು ಪಡೆದಿದ್ದರು. ಈ ಪ್ರದರ್ಶನದ ಮಧ್ಯೆ ಸ್ವಲ್ಪದರಲ್ಲಿಯೇ ಬುಮ್ರಾ ಸಾಧನೆಯೊಂದನ್ನು ಕೈ ಚೆಲ್ಲಿಸಿದ್ದಾರೆ. ಚೇತನ್ ಶರ್ಮಾ 1986 ರಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಪಡೆದಿದ್ದರು. ಈ ದಾಖಲೆ ಮುರಿಯಲು ಮತ್ತೊಮ್ಮೆ ಒಂದೇ ವಿಕೆಟ್ ಕೊರತೆಯನ್ನು ಬುಮ್ರಾ ಅನುಭವಿಸಿದ್ದಾರೆ.