ಪ್ರಯಾಣಿಕರಿದ್ದ ಖಾಸಗಿ ಬಸ್ಸೊಂದನ್ನು ದುಷ್ಕರ್ಮಿಗಳು ಹೈಜಾಕ್ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ನಡೆದಿದೆ. ಮಧ್ಯ ಪ್ರದೇಶದ ಪನ್ನಾದಿಂದ ಹರಿಯಾಣದ ಗುರ್‍ಗಾಂವ್‍ಗೆ ತೆರಳುತ್ತಿದ್ದ ಖಾಸಗಿ ಬಸ್ ಅನ್ನು ಮಾರ್ಗ ಮಧ್ಯದಲ್ಲೇ ಅಪಹರಿಸಲಾಗಿದ್ದು, ಮೂಲಗಳ ಪ್ರಕಾರ ಫೈನಾನ್ಸ್ ಕಂಪೆನಿಯ ಏಜೆಂಟ್‍ಗಳು ಈ ಕೃತ್ಯ ಎಸಗಿದ್ದಾರೆ ಎಂಬ ವಿಚಾರ ವರದಿಯಾಗಿದೆ.
ಆಗ್ರಾ ಸಮೀಪದ ಮಾಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೈಜಾಕ್ ಆಗಿದ್ದ ಬಸ್‍ನಿಂದ ಕೆಳಗೆ ಇಳಿದ ಮೂವರು ಪ್ರಯಾಣಿಕರು ಪೊಲೀಸರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆಯಿಂದ ಬಸ್ ಖರೀದಿಗಾಗಿ ಸಾಲ ಪಡೆಯಲಾಗಿತ್ತು. ಆದರೆ ಅಸಲು ಮತ್ತು ಬಡ್ಡಿ ಪಾವತಿಸದ ಹಿನ್ನೆಲೆಯಲ್ಲಿ ಬಸ್ ಅನ್ನು ಹೈಜಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.









