ಬೆಂಗಳೂರು: ರೈಡ್ ಶೇರಿಂಗ್ ಆಪ್ ಮೂಲಕ ಕ್ಯಾಬ್ (Cab) ಬುಕ್ ಮಾಡಿ ರದ್ದು ಮಾಡಿದ್ದ ಮಹಿಳೆಯ ವಾಟ್ಸಾಪ್ ಗೆ ಚಾಲಕ(Cab Driver) ಅಶ್ಲೀಲ ಫೋಟೋ ಮತ್ತು ವಿಡಿಯೋ ಕಳುಹಿಸಿರಿವು ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
32 ವರ್ಷದ ಮಹಿಳೆ, ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಕ್ಯಾಬ್ ಬರುವುದು ತಡವಾಗಿದ್ದರಿಂದ ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಕೋಪಗೊಂಡ ಕ್ಯಾಬ್ ಚಾಲಕ ದಿನೇಶ್ ಎಂಬಾತ ಮಹಿಳೆಯ ವಾಟ್ಸಪ್ ನಂಬರ್ಗೆ ನಗ್ನ ಚಿತ್ರ ಹಾಗೂ ವಿಡಿಯೋ ಕಳುಹಿಸಿದ್ದಾನೆ. ಶಾಕ್ ಆದ ಮಹಿಳೆ ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.