ತಾಂತ್ರಿಕ ದೋಷದಿಂದ ಅರ್ಧದಲ್ಲೇ ನಿಂತ ಕೇಬಲ್ ಕಾರ್ – ಪ್ರಯಾಣಿಕರ ರಕ್ಷಣೆ..
1 min read
ತಾಂತ್ರಿಕ ದೋಷದಿಂದ ಅರ್ಧದಲ್ಲೇ ನಿಂತ ಕೇಬಲ್ ಕಾರ್ – ಪ್ರಯಾಣಿಕರು ರಕ್ಷಣೆ..
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಕೇಬಲ್ ಕಾರ್ ತಾಂತ್ರಿಕ ದೋಷದಿಂದ ಸ್ಥಗಿತಗೊಂಡು 15 ಮಂದಿ ಮೂರು ಗಂಟೆಗಳ ಕಾಲ ಟ್ರಾಲಿಯಲ್ಲಿ ಸಿಲುಕಿಕೊಂಡಿದ್ದರು. ಇದೀಗ ಕೇಬಲ್ ಕಾರಿನಲ್ಲಿ ಸಿಲುಕಿಕೊಂಡಿದ್ದ ಎಲ್ಲ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕೇಬಲ್ ಕಾರಿನಲ್ಲಿ ತಾಂತ್ರಿಕ ದೋಷದಿಂದಾಗಿ ಒಟ್ಟು 15 ಪ್ರವಾಸಿಗರು ಪರ್ವಾನೂ ಪ್ರದೇಶದ ಟಿಂಬರ್ ಟ್ರ್ಯಾಲಿಯಲ್ಲಿ ಸಿಲುಕಿಕೊಂಡರು. ಸಿಕ್ಕಿಬಿದ್ದ ಪ್ರವಾಸಿಗರನ್ನು ರಕ್ಷಿಸಲು ಟ್ರಾಲಿಯನ್ನು ನಿಯೋಜಿಸಲಾಗಿದೆ ಮತ್ತು ಎಲ್ಲ ಜನರನ್ನು ರಕ್ಷಿಸಲಾಗಿದೆ.
ಪೊಲೀಸ್ ಅಧೀಕ್ಷಕ ವೀರೇಂದ್ರ ಶರ್ಮಾ ಅವರು ಇಂದು ಮುಂಜಾನೆ ಟ್ವೀಟ್ ಮಾಡಿದ್ದಾರೆ, “ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಆರು-ಏಳು ಪ್ರವಾಸಿಗರು ಪರ್ವಾನೂ ಟಿಂಬರ್ ಟ್ರ್ಯಾಲಿ (ಕೇಬಲ್-ಕಾರ್) ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಮತ್ತೊಂದು ಕೇಬಲ್ ಕಾರ್ ಟ್ರೋಲಿಯನ್ನು ನಿಯೋಜಿಸಲಾಗಿದೆ. ಟಿಂಬರ್ ಟ್ರ್ಯಾಲಿ ಆಪರೇಟರ್‌ನ ತಾಂತ್ರಿಕ ತಂಡವನ್ನು ನಿಯೋಜಿಸಲಾಗಿದೆ. ಮತ್ತು ಪೊಲೀಸ್ ತಂಡವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದಿದ್ದಾರೆ.
#WATCH | Himachal Pradesh: Rescue operation underway at Parwanoo Timber Trail where a cable car trolly with tourists is stuck mid-air. pic.twitter.com/VWR13M8wLV
— ANI (@ANI) June 20, 2022