ಚಂಡೀಗಢ: ದುಬಾರಿ ಬೆಲೆಯ ಕಾರಿನಲ್ಲಿ ಬಂದ ಇಬ್ಬರು ಕಳ್ಳಿಯರು ಮನೆಯ ಮುಂದಿನ ಹೂಕುಂಡ ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು, ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸೆಡಾನ್‌ನಲ್ಲಿ ಬಂದ ಇಬ್ಬರು ಮಹಿಳೆಯರಿಂದ ಈ ಕಳ್ಳತನ ನಡೆದಿದೆ. ಈ ಮಹಿಳೆಯರು ಮೊಹಾಲಿಯ ಸೆಕ್ಟರ್ 78 ರಲ್ಲಿ ಮನೆಯ ಪಕ್ಕ ಸೇಡನ್ (Sedan) ನಿಲ್ಲಿಸಿ ಬಂದು, ಮುಖ್ಯ ಗೇಟ್‌ನ ಎರಡು ಬದಿಗಳಲ್ಲಿ ಇರಿಸಲಾಗಿದ್ದ ಹೂಕುಂಡಗಳನ್ನು ಕದ್ದು ಕಾರಿನ ಹತ್ತಿರ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Women found stealing flowerpots outside a home in Mohali, Punjab.pic.twitter.com/XGuXad4g8w
— The Purusharth 🌟 (@thepurusharth) November 14, 2023
G20 ಶೃಂಗಸಭೆಯ ನಂತರ ದೆಹಲಿಯ ರಸ್ತೆಗಳನ್ನು ಹೂಕುಂಡಗಳು ಹಾಗೂ ಇನ್ನಿತರ ರೀತಿಯಲ್ಲಿ ಅಲಂಕರಿಸಲಾಗಿದ್ದು, ಹೂವು ಕುಂಡಗಳ ಕಳ್ಳತನದ ಹಲವಾರು ಘಟನೆಗಳು ವರದಿಯಾಗಿವೆ.