ಕ್ಯಾಡ್‍ಬರಿ ಚಾಕ್‍ಲೇಟ್ ನಲ್ಲಿ ದನದ ಮಾಂಸ ಬಳಕೆ
ಕ್ಯಾಡ್ ಬಲಿ ಚಾಕ್ ಲೇಟ್ ಎಲ್ಲರಿಗೂ ಆಲ್ ಟೈಂ ಫೇವರೇಟ್. ಆದ್ರೆ ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಚಾಕ್ ಲೇಟ್ ಬಗ್ಗೆ ಸುದ್ದಿ ಒಂದು ಹರಿದಾಡುತ್ತಿತ್ತು. ಅದು #boycottCadburyChocolate ಹ್ಯಾಷ್ಟ್ಯಾ ಗ್ನಲ್ಲಿ ಅಭಿಯಾನಕ್ಕೂ ಕಾರಣವಾಗಿತ್ತು.
ಏನ್ ಆ ಸುದ್ದಿ..?
ನಾವೆಲ್ಲಾ ತಿನ್ನುತ್ತಿರುವ ಕ್ಯಾಡ್ ಬರಿ ಚಾಕಲೇಟ್ ತಯಾರಿಕೆಯಲ್ಲಿ ದನದ ಮಾಂಸ ಬಳಸಲಾಗುತ್ತಿದೆ. ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ವಿಚಾರವಾಗಿದ್ದು, ಇದನ್ನೂ ಭಾರತದಲ್ಲಿ ಬ್ಯಾನ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿತ್ತು.
ಜೊತೆಗೆ ಈ ಚಾಕ್ ಲೇಟ್ ನಲ್ಲಿ ದನದ ಮಾಂಸ ಬಳಸುತ್ತಿರುವ ಬಗ್ಗೆ ಇರುವ ವೆಬ್ ಸೈಟ್ ಒಂದರ ವರದಿಯನ್ನು ಟ್ಯಾಗ್ ಮಾಡಲಾಗಿತ್ತು. ಇದು ಕಾಡ್ಗಿಚ್ಚಿನಂತೆ ಎಲ್ಲೆಡೆ ವೈರಲ್ ಆಗಲು ಶುರುವಾಗಿತ್ತು.
ಇದೀಗ ಈ ಬಗ್ಗೆ ಸ್ವತಃ ಕಂಪನಿ ಸ್ಪಷ್ಟನೆ ನೀಡಿದ್ದು, ಕ್ಯಾಡ್ ಬರಿ ಚಾಕ್ ಲೇಟ್ ನಲ್ಲಿ ದನದ ಮಾಂಸ ಬಳಸಲಾಗಿದೆ ಎಂದು ಒಪ್ಪಿಕೊಂಡಿದೆ. ಆದರೆ ಭಾರತದಲ್ಲಿ ನಾವು ಮಾರಾಟ ಮಾಡುತ್ತಿರುವ ಎಲ್ಲಾ ಚಾಕ್ ಲೇಟ್ ಗಳು ಶೇ.100ರಷ್ಟು ಶುದ್ಧ ಸಸ್ಯಹಾರಿ ಎಂದು ತಿಳಿಸಿದೆ.
ದನದ ಮಾಂಸ ಬಳಸಿ ಮಾಡಿರುವ ಚಾಕ್ ಲೇಟ್ ಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿಲ್ಲ. ಆಸ್ಟ್ರೇಲಿಯಾ ಸೇರಿದಂತೆ ಕೆಲ ವಿದೇಶಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಭಾರತದ ಕ್ಯಾಡ್ ಬರಿ ಕಂಪನಿ ಟ್ವೀಟ್ ಮೂಲಕ ತಿಳಿಸಿದೆ.
ಅಲ್ಲದೆ ಚಾಕಲೇಟ್ ಮೇಲೆ ಹಸಿರು ಚುಕ್ಕೆ ಇರುವುದನ್ನು ಗ್ರಾಹಕರು ಗಮನಿಸಬೇಕು ಎಂದು ಮನವಿ ಮಾಡಿಕೊಂಡಿದೆ.