ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ) ಸಾಲ ವಿತರಣೆ ಸಂದರ್ಭದಲ್ಲಿ ಆದಾಯ ತೆರಿಗೆ ನಿಯಮಗಳನ್ನು ಪಾಲಿಸಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.
ಸಾಲ ನೀಡುವಾಗ 20,000 ರೂಗಿಂತ ಹೆಚ್ಚು ನಗದು (cash payouts)ನ್ನು ನೀಡಬಾರದು. ಖಾತೆಗೆ ಹಣ ವರ್ಗಾವಣೆ ಮಾಡಬೇಕು. ಒಬ್ಬ ವ್ಯಕ್ತಿ ಇನೊಬ್ಬ ವ್ಯಕ್ತಿಯಿಂದ 20,000 ರೂಗಿಂತ ಹೆಚ್ಚಿನ ಹಣದ ಸಾಲ ನೀಡುತ್ತಿದ್ದರೆ ಕ್ಯಾಷ್ ರೂಪದಲ್ಲಿ ಅದನ್ನು ಕೊಡುವಂತಿಲ್ಲ. ಅಕೌಂಟ್ ಪೇಯೀ ಚೆಕ್, ಬ್ಯಾಂಕ್ ಡ್ರಾಫ್ಟ್, ಯುಪಿಐ ಇತ್ಯಾದಿ ಮೂಲಕ ಹಣದ ವಿತರಣೆ ಮಾಡಬೇಕು.
ಟಾಪ್ ಅಪ್ ಲೋನ್ ನೀಡುವಾಗ, ಒಟ್ಟು ಸಾಲದ ಮೊತ್ತ 20,000 ರೂಗಿಂತ ಹೆಚ್ಚಿದ್ದರೆ ಆಗಲೂ ಕೂಡ ನಗದು ರೂಪದಲ್ಲಿ ನೀಡುವಂತಿಲ್ಲ.