ನರಹಂತಕ ಹುಲಿಯ ಸೆರೆ ಅಸಾಧ್ಯ : ಗುಂಡಿಕ್ಕಲು ಕಾನೂನಿನ ತೊಡಕು
1 min read
ನರಹಂತಕ ಹುಲಿ ಸೆರೆ ಅಸಾಧ್ಯ : ಗುಂಡಿಕ್ಕಲು ಕಾನೂನಿನ ತೊಡಕು
ಕೊಡಗು: ಜಿಲ್ಲೆಯಲ್ಲಿ ನಿರಂತರ ದಾಳಿ ನಡೆಸುತ್ತಿರುವ ನರಹಂತಕ ಹುಲಿ ಸೆರೆ ಅಸಾಧ್ಯವಾಗಿದ್ದು ಅರವಯಳಿಕೆ ನೀಡಿ ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದು ಸೆರೆ ಕಷ್ಟವಾದಲ್ಲಿ ಮಾತ್ರ ಹುಲಿಗೆ ಗುಂಡಿಕ್ಕಲು ಅವಕಾಶವಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಗುಂಡಿಕ್ಕುವುದನ್ನು ಕೊನೆಯ ಪ್ರಕ್ರಿಯೆಯನ್ನಾಗಿ ಪರಿಗಣಿಸಬೇಕಾಗಿ ಇಲಾಖೆಯ ಅರಣ್ಯ ಅಧಿಕಾರಿಗಳು ಸೂಚಿಸಿದ್ದಾರೆ.
ಹುಲಿಯನ್ನು ತಕ್ಷಣವೇ ಸೆರೆಹಿಡಿಯಲು ಹಾಗೂ ಒಂದು ವೇಳೆ ನಿರ್ದಿಷ್ಟವಾಗಿ ಗುರುತಿಸಲಾದ ಹುಲಿಯನ್ನಯ ಸೆರೆಹಿಡಿಯಲು ಅಸಾಧ್ಯವಾದಲ್ಲಿ ಮಾತ್ರ ಸದರಿ ಹುಲಿಗೆ ಗುಂಡಿಕ್ಕುವುದನ್ನ ಕೊನೆಯ ಪ್ರಕ್ರಿಯೆಯನ್ನಾಗಿ ಪರಿಗಣಿಸಬೇಕು ಎಂದು ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ತಿಳಿಸಿದ್ದಾರೆ.
ಹಿನ್ನೆಲೆ
ಫೆಬ್ರವರಿ 22 ರಂದು ಶ್ರೀಮಂಗಳ ಹೋಬಳಿಯ ಟಿ ಶೆಟ್ಟಿಗೇರಿ ಮತ್ತು ಕುಮಟೂರು ಗ್ರಾಮಗಳಲ್ಲಿ ಹುಲಿ ದಾಳಿ ನಡೆಸಿತ್ತು. ಈ ವೇಳೆ ಅಯ್ಯಪ್ಪ ಎಂಬುವವರು ಮೃತಪಟ್ಟಿದ್ದರು.
ಇದಾದ ಬಳಿಕ 21ನೇ ತಾರೀಕು ಪಣಿ ಎರವರ ಬೋಳಕ್ಕ ಎಂಬೋರು ಹುಲಿಗೆ ಬಲಿಯಾಗಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಹುಲಿ ಸೆರೆ ಹಿಡಿಯುವ ಕಾರ್ಯಚರಣಕ್ಕೆ ಇಳಿದಿತ್ತು.
