ಬೆಂಗಳೂರು: ಕಾರಿನ ಟೈಯರ್ ಬ್ಲಾಸ್ಟ್ ಆಗಿ ಆಟೋಗೆ ಗುದ್ದಿ, ಮನೆಯ ಕಂಪೌಂಡ್ ನಾಶವಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಇಲ್ಲಿಯ ಲಾಲ್ ಬಾಗ್ ರಸ್ತೆಯಲ್ಲಿ ನಡೆದಿದೆ. ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರಿನ ಟಯರ್ ಬ್ಲಾಸ್ಟ್ (Tyre Blast) ಪಾರ್ಕ್ ಮಾಡಿದ್ದ ಆಟೋಗೆ ಗುದ್ದಿದೆ. ಆ ರಭಸಕ್ಕೆ ಮನೆಯ ಕಂಪೌಂಡ್ ಕುಡಿ ಸಂಪೂರ್ಣ ಹಾಳಾಗಿದೆ. ವೇಗವಾಗಿ ಲಾಲ್ ಬಾಗ್ ರಸ್ತೆ ಮೂಲಕ ಜಯ ನಗರದ ಮಾರ್ಗವಾಗಿ ಹೊರಟಿದ್ದ ಕಾರಿನ ಟಯರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಕೂದಲೆಳೆ ಅಂತರಲ್ಲಿ ವೃದ್ಧ ಪಾರಾಗಿದ್ದಾರೆ.
ಕಾಂಪೌಂಡ್ ನೆಲಕ್ಕುರುಳಿದ್ದು, ಆಟೋ (Innova Car and Auto) ಹಾಗೂ ಕಾರು ಜಖಂಗೊಂಡಿದೆ. ಈ ಕುರಿತು ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ (VV Puram Traffic Police) ಕೇಸ್ ದಾಖಲಾಗಿದೆ.