ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ : ಡಿ.ಕೆ.ಶಿವಕುಮಾರ್

1 min read

ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ : ಡಿ.ಕೆ.ಶಿವಕುಮಾರ್

ಬೆಂಗಳೂರು : ನಮ್ಮ ಸರ್ಕಾರದ ಶಾಸಕರನ್ನು ಸೆಳೆಯುತ್ತೇವೆ ಎಂದಾಗ ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ. ಯಾರು ಯಾರ ಜತೆ ಮಾತನಾಡುತ್ತಿದ್ದಾರೆ, ಎಲ್ಲಿ ಹೋಗುತ್ತಿದ್ದಾರೆ ಎಂದು ಗಮನಿಸಿದ್ದೆವು. ಆದರೆ ಇದು ಅವರ ವೈಯಕ್ತಿಕ ವಿಚಾರ. ಅದರ ಅವಶ್ಯಕತೆ ನಮಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಅವರನ್ನ ಸಂಪರ್ಕಿಸಲು ಪ್ರಯತ್ನಿಸಿದ್ದೆ ಎಂದು ಸಿಡಿ ಯುವತಿ ಹೇಳಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ ನಾವು ಭೇಟಿ ಮಾಡಿಲ್ಲ. ನಾವು ರಾಜಕಾರಣಿಗಳು ಹಾಗೂ ನೀವು ಮಾಧ್ಯಮದವರು ಸಾರ್ವಜನಿಕ ಜೀವನದಲ್ಲಿ ಇರುವವರು. ಯಾವುದೇ ಪಕ್ಷದ ರಾಜಕಾರಣಿ ಆದರೂ ನೊಂದವರಿಗೆ, ಕಷ್ಟ ಅಂತಾ ಬಂದವರಿಗೆ ಸಹಾಯ ಮಾಡುವ ಪ್ರವೃತ್ತಿ ಹೊಂದಿರುತ್ತಾರೆ. ಹಾಗೇ ಆ ಹೆಣ್ಣು ಮಗಳು ನನ್ನ ಭೇಟಿಗೆ ಪ್ರಯತ್ನಿಸಿದೆ. ಸಂಕಷ್ಟ ಹೇಳಿಕೊಂಡು ಬಂದವರಿಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

D K Shivakumar

ಇನ್ನು ದಿನ ಬೆಳಗಾದರೆ ನನ್ನ ಮನೆ ಬಳಿ ಬಂದು ನೋಡಿ. ಅನೇಕರು ಹಣಕಾಸು ಸಮಸ್ಯೆ, ಸರ್ಕಾರದಿಂದ ತೊಂದರೆ, ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬರುತ್ತಾರೆ. ಅದೇ ರೀತಿ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು. ಒಂದು ವೇಳೆ ನಮ್ಮಿಂದ ಯಾರಿಗಾದರೂ ತೊಂದರೆಯಾದರೆ ಆಡಳಿತ ಪಕ್ಷದವರ ಬಳಿ ಹೋಗುತ್ತಾರೆ. ಅದೇ ರೀತಿ ಆ ಯುವತಿ ಬಂದಿರಬಹುದು. ನಾನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ಆಕೆ ಬಂದರೂ ನಾನು ಪರಿಶೀಲನೆ ಮಾಡುತ್ತೇನೆ ಎಂದರು.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd