cd case ವಿಡಿಯೋ ಧಾರವಾಹಿ ಥರ ಬರ್ತಿದೆ : ಬಸವರಾಜ್ ಬೊಮ್ಮಾಯಿ
ಬೆಂಗಳೂರು : ಡೈಲಿ ವಿಡಿಯೊ, ಆಡಿಯೋ, ಸಿಡಿ ಬಿಡುಗಡೆ ಆಗ್ತಿದೆ. ಸರಣಿ ಆಡಿಯೊ, ವಿಡಿಯೋ ಧಾರವಾಹಿ ಥರ ಬರ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಡೈಲಿ ವಿಡಿಯೊ, ಆಡಿಯೋ, ಸಿಡಿ ಬಿಡುಗಡೆ ಆಗ್ತಿದೆ.
ಸರಣಿ ಆಡಿಯೊ, ವಿಡಿಯೋ ಧಾರವಾಹಿ ಥರ ಬರ್ತಿದೆ. ಸಿಡಿ, ಆಡಿಯೋ, ವಿಡಿಯೋ ಇಟ್ಟುಕೊಂಡು ಎಸ್.ಐ.ಟಿ ಕೂಲಂಕಷವಾಗಿ ತನಿಖೆ ಮಾಡ್ತಿದೆ.
ಅದರಲ್ಲಿರುವ ವಿಚಾರ ತಿಳಿದುಕೊಂಡು ಸಂಪೂರ್ಣವಾಗಿ ತನಿಖೆ ಮುಂದುವರೆಸುತ್ತೀವಿ. ಯಾವ ಪ್ರಭಾವಕ್ಕೂ, ಒತ್ತಡಕ್ಕೂ , ದಾರಿತಪ್ಪಿಸುವುದಕ್ಕೆ ಎಸ್.ಐ.ಟಿ ತಲೆ ಕೆಡಿಸಿಕೊಳ್ಳಲ್ಲ.
ಕಾನೂನು ಪ್ರಕಾರವಾಗಿ, ನಿಷ್ಠುರವಾಗಿ, ಪರ ವಿರೋಧ ಇಲ್ಲದೇ ಕ್ರಮಬದ್ಧವಾಗಿ ಎಸ್.ಐ.ಟಿ ಕೆಲಸ ಮಾಡ್ತಿದೆ ಅದು ಮುಂದುವರೆಯುತ್ತೆ ಎಂದು ತಿಳಿಸಿದ್ದಾರೆ.
