ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ: ಹವಾಮಾನ ವೈಪರಿತ್ಯ ಕಾರಣ

1 min read
CDS Bipin Rawat Helicopter Disaster: Due to Climate Saaksha tv

ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ: ಹವಾಮಾನ ವೈಪರಿತ್ಯ ಕಾರಣ

ನವದೆಹಲಿ: ಕಳೆದ ತಿಂಗಳು ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ  ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌  ಮತ್ತು ಅವರ ಪತ್ನಿ ಮರಣಹೊಂದಿದ್ದರು. ಈ ಅಪಘಾತಕ್ಕೆ ಹವಾಮಾನ ವೈಪರಿತ್ಯ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.

ಕಳೆದ ವರ್ಷ ಡಿಸೆಂಬರ್​​ 8ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಿಂಗ್ಟನ್ ಗೆ ಪ್ರಯಾಣಿಸುತ್ತಿದ್ದ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಮತ್ತು 13 ಸೇನಾ ಸಿಬ್ಬಂದಿ  ಕೂನೂರು ಕಣಿವೆಯಲ್ಲಿ ಹೆಲಿಕಾಪ್ಟ್ ರ್ ಅಪಘಾತ ದುರಂತದಿಂದ ಮರಣ ಹೊಂದಿದರು. ಈ ಅಪಘಾತವು ಅನಿರೀಕ್ಷಿತ ಹವಾಮಾನ ವೈಪರಿತ್ಯದಿಂದ ಮೋಡದೊಳಕೆ ಹೆಲಿಕಾಪ್ಟ್ ರ್ ಪ್ರವೇಶಿಸಿದೆ, ಇದರಿಂದ ಪೈಲೆಟ್ ವಿಚಲಿತಗೊಂಡಿದ್ದಾರೆ. ಹೀಗಾಗಿ ಅಪಘಾತ ಸಂಭವಿಸಿದೆ ಎಂದು ತನಿಕಾ ತಂಡ ವರದಿ ಸಲ್ಲಿಸಿದೆ.

CDS Bipin Rawat Helicopter Disaster: Due to Climate Saaksha Tv

ಅಲ್ಲದೇ  ಅಪಘಾತಕ್ಕೆ ಯಾವುದೇ ತಾಂತ್ರಿಕ ವೈಫಲ್ಯ, ವಿಧ್ವಂಸಕ ಕೃತ್ಯ ಅಥವಾ ನಿರ್ಲಕ್ಷ್ಯ ಕಾರಣವಾಗಿಲ್ಲ. ಸೇನಾ ಹೆಲಿಕಾಪ್ಟರ್ ಪತನದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಏರ್ ಮಾರ್ಷಲ್​ ಮನ್ವಿಂದರ್​ ಸಿಂಗ್ ನೇತೃತ್ವದ ತನಿಖಾ ತಂಡ ರಚಿಸಿತ್ತು. ಈ ತಂಡ ಇದೀಗ ತನಿಖೆ ನಡೆಸಿ ವರದಿ ಸಲ್ಲಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd