ಪವರ್ ಸ್ಟಾರ್ ಬರ್ತ್ ಡೇ : ಅಪ್ಪು ಗೆ ಯಾರೆಲ್ಲಾ ಶುಭಹಾರೈಸಿದ್ದಾರೆ..?

1 min read

ಪವರ್ ಸ್ಟಾರ್ ಬರ್ತ್ ಡೇ : ಅಪ್ಪು ಗೆ ಯಾರೆಲ್ಲಾ ಶುಭಹಾರೈಸಿದ್ದಾರೆ..?

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ @powerstarpuneethrajkumar ಅವರಿಗೆ ಇಂದು ಹುಟ್ಟಹಬ್ಬದ ಸಂಭ್ರಮ. ಈ ಪ್ರಯಕ್ತ ಅಭಿಮಾನಿಗಳು ಹಾಗೂ ಸಿನಿಮಾ ಸ್ಟಾರ್ ಗಳು ಅಪ್ಪುಗೆ ಸಾಮಾಜಿಕ ಜಾಲತಾಣದ ಮೂಲಕ ವಿಷ್ ಮಾಡ್ತಾಯಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್

ಅದೇ ರೀತಿ  ಚಾಲೆಂಜಿಂಗ್ ಸ್ಟಾರ್ , ದರ್ಶನ್, ಅವರು ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ.darshan

ಕಿಚ್ಚ ಸುದೀಪ್

ಪುನೀತ್ ರಾಜ್ ಕುಮಾರ್ ಅವರು 47ನೇ ವಸಂತಕ್ಕೆ ಕಾಲಿಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಮಾಡಿದ್ದು, ‘ಹುಟ್ಟುಹಬ್ಬದ ಶುಭಾಶಯಗಳು ಪುನೀತ್ ರಾಜ್ ಕುಮಾರ್’ ಎಂದು ಶುಭಕೋರಿದ್ದಾರೆ. ಇತ್ತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ, ಹುಟ್ಟುಹಬ್ಬದ ಶಭಾಶಯ ಕೋರಿದ್ದು,  ‘ನಿಮಗೆ ಒಳ್ಳೆಯದಾಗಲಿ’ ಎಂದು ಟ್ವೀಟ್ ಮಾಡಿದ್ದಾರೆ.

ಧ್ರುವ ಸರ್ಜಾ

‘ವಿಶ್ ಯು ಹ್ಯಾಪಿ ಬರ್ತ್ ಡೇ ಪುನೀತ್ ರಾಜ್ ಕುಮಾರ್ ಸರ್’.

ವಿಜಯ್ ಕಿರಂಗಂದೂರು, ನಿರ್ಮಾಪಕ  

ನಿರ್ಮಾಪಕ ವಿಜಯ್ ಕಿರಂಗದೂರು ಅವರು ಸಹ ಪುನೀತ್ ರಾಜ್ ಕುಮಾರ್ ಅವರಿಗೆ ಶುಭಕೋರಿ ಜೇಮ್ಸ್ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ‘ನಮ್ಮ ನೆಚ್ಚಿನ ‘ಯುವರತ್ನ’ನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಂದೆಗೆ ತಕ್ಕ ಮಗ, ಅಭಿಮಾನಿಗಳ ಪಾಲಿನ ‘ಅಪ್ಪು’, ಚಿತ್ರರಂಗದ ಪವರ್ ಸ್ಟಾರ್ ಆಗಿರುವ ಪುನೀತ್ ರಾಜ್ ಕುಮಾರ್ ಅವರು ಹೃದಯವಂತರೂ ಹೌದು. ನಿಮ್ಮ ಬದುಕಿಗೆ ನೀವೇ ಕನ್ನಡಿ, ನೂರ್ಕಾಲ ಸುಖವಾಗಿ ಬಾಳಿ’ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ

‘ವಿಶ್ ಯೂ ಹ್ಯಾಪಿ ಬರ್ತ್ ಡೇ ಪುನೀತ್ ಸರ್ ‘ ಎಂದು ಸಿಂಪಲ್ ಸ್ಟಾರ್ ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ.

ಡಾಲಿ ಧನಂಜಯ

ಡಾಲಿ ಧನಂಜಯ ಅವರು ಸಹ ಅಪ್ಪುಗೆ ವಿಶ್  ಮಾಡಿದ್ದು, ‘ ಹ್ಯಾಪಿ ಬರ್ತ್ ಡೇ ಅಪ್ಪು ಸರ್ ‘ ಎಂದಿದ್ದಾರೆ

ಗೋಲ್ಡನ್ ಸ್ಟಾರ್ ಗಣೇಶ್

‘ ಹ್ಯಾಪಿ ಬರ್ತ್ ಡೇ ಪುನೀತ್ ಸರ್ ‘ಫೀಲ್ ದ ಪವರ್ ಪ್ರೋ ಲುಕ್ಸ್ ಫ್ಯಾಬ್ಯುಲೆಸ್’

ರಕ್ಷಿತ್ ಶೆಟ್ಟಿ

‘ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ಇನ್ನಷ್ಟು ಉನ್ನತ ಮಟ್ಟಕ್ಕೆ ಸಾಗಿ ಜನರಿಂದ ಮತ್ತಷ್ಟು ಪ್ರೀತಿ ಗಳಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’.

ಪ್ರತಾಪ್ ಸಿಂಹ

‘ಕನ್ನಡ ಚಿತ್ರರಂಗದ ಪವರ್ ಸ್ಟಾರ್ ನಮ್ಮ ಹೆಮ್ಮೆಯ ಅಪ್ಪು ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. Happy Birthday Appu Sir !’.  

ಹೀಗೆ ಅನೇಕರು ಅಪ್ಪುಗೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದು, ಪುನೀತ್ ರಾಜ್ ಕುಮಾರ್ ಸಹ ಟ್ವೀಟ್ ಗಳನ್ನ ರೀಟ್ವೀಟ್  ಮಾಡುತ್ತಾ ಧನ್ಯವಾದಗಳನ್ನ ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd