Centuripe Italy Shape : ಮನುಷ್ಯರಿರುವ ಊರು.. ಮನುಷ್ಯನಂತಿರುವ ಊರು..
ಮನುಷ್ಯರಿರುವ ಊರುಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಆದ್ರೆ ಮನುಷ್ಯನಂತೆ ಇರುವ ಊರು ಇದೊಂದೆ ಇದೆ.
ಸೆಂಟೂರಿಪೆ .. ಇಟಲಿಯಲ್ಲಿರುವ ಸಣ್ಣ ಪಟ್ಟಣ .. ಮೇಲಿನಂದ ನೋಡಿದರೇ ಇದು ಥೇಟ್ ಮನುಷ್ಯನಂತೆ ಕಾಣುತ್ತದೆ.
ಸ್ಥಳೀಯ ಛಾಯಾಗ್ರಾಹಕ ಪಿಯೊ ಆಂಡ್ರಿಯಾ ಪೆರ್ರಿ ಗೂಗಲ್ ಅರ್ಥ್ ನಲ್ಲಿ ತಮ್ಮ ಊರಿನ ನಕ್ಷೆಯನ್ನು ನೋಡಿದ್ದಾರೆ.
ಆಗ ಅವರಿಗೆ ಆ ಪಟ್ಟಣ ಮನುಷ್ಯನಂತೆ ಇದೆ ಎಂದು ಎನಿಸಿದೆ. ಆಗ ಡ್ರೋಣ್ ಸಹಾಯದಿಂದ ಹಲವು ಫೋಟೋಗಳನ್ನು ತೆಗೆದಿದ್ದಾರೆ.
ಕಟ್ ಮಾಡಿದ್ರೆ ಅವರ ಊರು ಮನುಷ್ಯನಂತೆ ಕಂಡಿದೆ.
ಇದನ್ನು ಪಿಯೊ ಆಂಡ್ರಿಯಾ ಪೆರ್ರಿ ಇಂಟರ್ ನೆಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ ಹಲವರು ಇದನ್ನ ಫೇಕ್ ಎಂದು ಮೂದಲಿಸಿದ್ದಾರೆ.
ಮಾರ್ಫಿಂಗ್ ಮಾಡಿದ್ದೀಯಾ ಎಂದು ಟೀಕೆ ಮಾಡಿದ್ದಾರೆ. ಆದ್ರೆ ನಂತರ ಗೂಗಲ್ ಮ್ಯಾಪ್ ನಲ್ಲಿ ಚೆಕ್ ಮಾಡಿ ಪೆರ್ರಿ ಬಳಿ ಕ್ಷಮೆ ಕೇಳಿದ್ದಾರೆ.
5000 ಜನರಿರುವ ಈ ಪಟ್ಟಣ ಸಮುದ್ರ ಮಟ್ಟಕ್ಕಿಂತ 2,400 ಅಡಿಗಳ ಎತ್ತರಲ್ಲಿದೆ.