ತುರ್ತು ಬಳಕೆಗೆ ಚೀನಾದ ಸಿನೊಫಾರ್ಮ್ ಲಸಿಕೆಗೆ ಮಾನ್ಯತೆ ನೀಡಿದ WHO
ಚೀನಾ : ತುರ್ತು ಬಳಕೆಗೆ ಚೀನಾದ ಸಿನೊಫಾರ್ಮ್ ಲಸಿಕೆಗೆ WHO ಮಾನ್ಯತೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಚೀನಾದ ಸಿನೊಫಾರ್ಮ್ ಕೋವಿಡ್ -19 ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ. ಫೈಜರ್-ಬಯೋಟೆಕ್, ಮಾಡರ್ನಾ ಆಸ್ಟ್ರಾಜೆನೆಕಾ-ಎಸ್ ಕೆ ಬಯೋ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಜಾನ್ಸೆನ್ ಲಸಿಕೆಗಳನ್ನು WHO ಈ ಹಿಂದೆಯೇ ಮಾನ್ಯ ಮಾಡಿತ್ತು.
ಆದರೆ ಡೇಟಾ ಸಂಬಂಧಿತ ಸಮಸ್ಯೆಗಳಿಂದಾಗಿ ಚೀನಾದ ಲಸಿಕೆಗೆ ಮಾನ್ಯತೆ ವಿಳಂಬವಾಗಿತ್ತು. ಚೀನಾ ತನ್ನ 5 ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ. ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಬಳಸುತ್ತಿದೆ.
ಸಿನೋಫಾರ್ಮ್ ಲಸಿಕೆಯನ್ನು 45 ದೇಶಗಳು ಬಳಸಲು ವ್ಯಾಪ್ತಿ ಹೊಂದಿದ್ದು, 65 ದಶಲಕ್ಷ ಪ್ರಮಾಣವನ್ನು ನೀಡಲಾಗಿದೆ. ಆದ್ರೆ ಅನೇಕ ದೇಶಗಳು ಲಸಿಕೆ ಬಳಕೆಗೆ ಹಿಂದೇಟು ಹಾಕಿದ್ದವು. ಆದ್ರೆ ಈಗ ವಿಶ್ವಸಂಸ್ಥೆಯಿಂದಲೇ ಲಸಿಕೆಗೆ ಮಾನ್ಯತೆ ಸಿಕ್ಕಿದೆ.