ಚೀನಾದಲ್ಲಿ ಭೀಕರ ಪ್ರವಾಹ :  ಮೆಟ್ರೊ ಸುರಂಗ ಮಾರ್ಗಕ್ಕೆ ನುಗ್ಗಿದ ನೀರು, 12 ಮಂದಿ ಸಾವು – ಭಯಾನಕ ದೃಶ್ಯಗಳು ವೈರಲ್

2 min read

ಚೀನಾದಲ್ಲಿ ಭೀಕರ ಪ್ರವಾಹ :  ಮೆಟ್ರೊ ಸುರಂಗ ಮಾರ್ಗಕ್ಕೆ ನುಗ್ಗಿದ ನೀರು, 12 ಮಂದಿ ಸಾವು – ಭಯಾನಕ ದೃಶ್ಯಗಳು ವೈರಲ್

ಕೊರೊನಾ ತವರು ಚೀನಾದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ..  ಚೀನಾದ ಝೆಂಗ್‌ಝೊ ನಗರದ ಮೆಟ್ರೊ ಸುರಂಗ ಮಾರ್ಗದಲ್ಲಿ ಪ್ರವಾಹ ಉಂಟಾಗಿ 12 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.  ಏಕಾಏಕಿ ಸುರಿದ ಮಳೆಯಿಂದಾಗಿ ಮೆಟ್ರೊ ಸುರಂಗ ಮಾರ್ಗದಲ್ಲಿ ನೀರು ನುಗ್ಗಿದ್ದು, ಪ್ರವಾಹ ಸ್ಥಿತಿ ಉಂಟಾಗಿದ್ದು,  ಅನೇಕರ ಜೀವ ಹೋಗಿದೆ..  10 ಕ್ಕಿಂತ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಚೀನಾದಲ್ಲಿ ಭೀಕರ ಪ್ರವಾಹದಿಂದಾಗಿ ಹಲವೆಡೆ ಜನರು ಪರದಾಡ್ತಿದ್ರೆ, ರಸ್ತೆಗಳಲ್ಲಿ ನದಿಯಂತೆ ಮಳೆ ನೀರು ಉಕ್ಕಿ ಹರಿಯುತ್ತಿವೆ.. ಇನ್ನೂ ಹಲವೆಡೆ ಜನರು ಕೂದಳೆಲೆ ಅಂತರದಲ್ಲಿ ಪಾರಾಗಿದ್ರೆ, ನೀರಿನಲ್ಲಿ ಕಾರುಗಳ ವಾಹನಗಳು ಕೊಚ್ಚಿ ಹೋಗುತ್ತಿರುವಂತ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದ್ದು , ನೆಟ್ಟಿಗರ ಜೀವ ಝಲ್ ಎನಿಸಿದೆ.

 

ಬೀಜಿಂಗ್ ಹಾಗೂ ಹೆನಾನ್ ಪ್ರಾಂತ್ಯದಲ್ಲಿ ಕಳೆದ ಕೆಲ ದಿನಗಳಿಂದ ದಾಖಲೆ ಪ್ರಮಾಣದ ಮಳೆಯಾಗುತ್ತಿದ್ದು, ಇದುವರೆಗೆ 1 ಕೋಟಿಗೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಜತೆಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿಲ್ಲ ಎಂದ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ..!

ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಗೊತ್ತಾ..? ಇವುಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚು..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd