ನಿಜಕ್ಕೂ ಐನ್ ಸ್ಟೈನ್ ಗಣಿತದಲ್ಲಿ ಫೇಲ್ ಆಗಿದ್ರಾ, ಚೈನಾ ಮಹಾಗೋಡೆ ಸ್ಪೇಸ್ ನಿಂದಲೂ ಕಾಣುತ್ತಾ…! ನಿಜ ಅಂತ ನಂಬಿದ್ದ ಸುಳ್ಳುಗಳ ಬಗ್ಗೆ..!

1 min read

ನಿಜಕ್ಕೂ ಐನ್ ಸ್ಟೈನ್ ಗಣಿತದಲ್ಲಿ ಫೇಲ್ ಆಗಿದ್ರಾ, ಚೈನಾ ಮಹಾಗೋಡೆ ಸ್ಪೇಸ್ ನಿಂದಲೂ ಕಾಣುತ್ತಾ…! ನಿಜ ಅಂತ ನಂಬಿದ್ದ ಸುಳ್ಳುಗಳ ಬಗ್ಗೆ..!

ಪ್ರಪಂಚದಲ್ಲಿ ಅನೇಕ ವಿಚಾರಗಳು.. ಹಲವಾರು ವಿಷಯಗಳ ಬಗ್ಗೆ ಎಲ್ಲರ ಆಲೋಚನೆಗಳು ಒಂದೇ ರೀತಿಯಲ್ಲಿಯೇ ಇರುತ್ತವೆ. ಆದ್ರೆ  ಪ್ರಪಂಚದಲ್ಲಿ ಅನೇಕ ಸುಳ್ಳುಗಳಿವೆ. ಆದ್ರೆ ನಾವು ಇವತ್ತಿಗೂ ಅವುಗಳನ್ನ ನಿಜ ಎನ್ನುತ್ತಲೇ ನಂಬುತ್ತಾ ಬಂದಿದ್ದೇವೆ.. ಇಂಟರ್ ನೆಟ್ ನಲ್ಲಿ ಇರುವುದೆಲ್ಲಾ ಅಥವಾ ಪುಸ್ತಕದಲ್ಲಿರುವುದನ್ನೆಲ್ಲಾ ನಾವು ಸತ್ಯ ಅಂತ ನಂಬುವುದಿಲ್ಲ. ಆ ಬಗ್ಗೆ ನಮ್ಮದೇ ಸವಾಲುಗಳು ಸೃಷ್ಟಿಯಾಗಿರುತ್ತವೆ. ಕೆಲವೊಮ್ಮೆ ಇಷ್ಟು ನಾವು ಓದಿರುವ ಪಠ್ಯಗಳಲ್ಲಿರುವಂತಹ ಕೆಲ ಅಂಶಗಳು ನಿಜ ಅಂತ ನಂಬುವುದಕ್ಕು ಹಿಂದೂ ಮುಂದು ನೋಡ್ತೇವೆ.

ಅಂತಹ ಪ್ರಪಂಚದ ಕೆಲ ಇಂಟ್ರೆಸ್ಟಿಂಗ್ ಮತ್ತು ನಾವು ನಿಜ ಎಂದುಕೊಂಡಿದ್ದ ಸುಳ್ಳುಗಳ ಬಗ್ಗೆ ನಾವಿವತ್ತು ತಿಳಿಯೋಣ.

ಮೂನ್ ವಾಕ್… ಆವಿಷ್ಕರಿಸಿದ್ದು ಪಾಪ್ ಜಗತ್ತಿನ ಲೆಜೆಂಡ್ ಮೈಕಲ್ ಜ್ಯಾಕ್ಸನ್ ಅಲ್ಲ..?

ಪಾಪ್ ಮ್ಯೂಸಿಕ್ ಇಂಡಸ್ಟ್ರಿಯ ಬಾದ್ ಶಾ ದಿ ಲೆಜೆಂಡ್ ಮೈಕಲ್ ಜಾಕ್ಸನ್ ಬಗ್ಗೆ ಎಲ್ರಿಗೂ ಗೊತ್ತೇ ಇರುತ್ತೆ. ಗಾಯಕನ ಜೊತೆಗೆ ಅತ್ಯದ್ಭುತ ಡ್ಯಾನ್ಸರ್ ಮೈಕಲ್ ಜಾಕ್ಸನ್ ವಿಭಿನ್ನ ಶೈಲಿಯ ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ವೆಸ್ಟ್ರನ್ ಡ್ಯಾನ್ಸ್ ಸಂಸ್ಕoತಿಯಲ್ಲಿ ಕಿಚ್ಚು ಹೊತ್ತಿಸಿತ್ತು. ಅದ್ರಲ್ಲೂ ಮೂನ್ ವಾಕ್….. ಬಹುತೇಕ ಮಂದಿ ಮೂನ್ ವಾಕ್ ಆವಿಷ್ಕರಿಸಿದ್ದು, ಅಥವ ಆರಂಭಿಸಿದ್ದು ಮೈಕಲ್ ಜಾಕ್ಸನ್ ಎನ್ನುವ ಭ್ರಮೆಯಲ್ಲಿಯೇ ಇರುತ್ತಾರೆ. ಅಲ್ದೇ ಮೈಕಲ್ ಜಾಕ್ಸನ್ ಸಿಗ್ನೇಚರ್ ಸ್ಟೆಪ್ ಅಂತ ಕೂಡ ಅಂದುಕೊಂಡಿರುತ್ತಾರೆ.

ಆದ್ರೆ ಆಶ್ಚರ್ಯ ಅಂದ್ರೆ ಮೂನ್ ವಾಕ್ ಮೊದಲು ಶುರು ಮಾಡಿದ್ದು ಮೈಕಲ್ ಜಾಕ್ಸನ್ ಅಲ್ಲ.. ಮೈಕಲ್ ಜಾಕ್ಸನ್ 1983ರಲ್ಲಿ ಮೊದಲ ಬಾರಿಗೆ ಮೂನ್ ವಾಕ್ ಮಾಡಿದ್ರು. ಆದ್ರೆ ಅಸಲಿಗೆ ಮೈಕಲ್ ಜಾಕ್ಸನ್ ಈ ಸ್ಟೆಪ್ ಕಲಿತಿದ್ದು, ಕ್ಯಾಸ್ಪರ್ ಕ್ಯಾಂಡಿಡೇಟ್ ಹಾಗೂ ಕೂಲಿ ಜಾಕ್ಸನ್ ಅವರಿಂದ.. ಹಾಗೇ ಸುಮಾರು 1970 ರಲ್ಲೇ ಕೂಲಿ ಜಾಕ್ಸನ್ ಹಾಗೂ ಕ್ಯಾಸ್ಟರ್ ಮೂನ್ ವಾಕ್ ಮಾಡಿದ್ದರು. ಅಷ್ಟೇ ಅಲ್ಲ ಮಾರ್ಷಲ್ ಮಾಕ್ರ್ಯು ಸಹ ಮೈಕಲ್ ಜಾಕ್ಸನ್ ಗಿಂತಲೂ ಮೊದಲೇ ಸ್ಟೇಜ್ ಮೇಲೆ ಮೂನ್ ವಾಕ್ ಮಾಡಿದ್ರು. ಇವರೆಲ್ಲರಿಗಿಂತಲೂ ಮುಂಚೆ ಬಿಲ್ ಬ್ಯಾಲೆ ಎಂಬುವ ಡ್ಯಾನ್ಸರ್ ಮೂನ್ ವಾಕ್ ಮಾಡಿದ್ದರು. ಹೀಗಾಗಿ ಯಾರು ಮೂನ್ ವಾಕ್ ಆವಿಷ್ಕರಿಸಿದ್ದರು ಅಂತ ಅಂತಿಮ ನಿರ್ಣಯಕ್ಕೆ ಬರುವುದು ಕಷ್ಟ..

ಗ್ರೇಟ್ ವಾಲ್ ಆಫ್ ಚೈನಾ / ಚೀನಾದ ಮಹಾಗೋಡೆ ಅಸಲಿಯತ್ತಲ್ಲಿ ಅಷ್ಟು ‘ಗ್ರೇಟ್’ ಅಲ್ಲ…?

ಅನೇಕರು ಈ ಬಗ್ಗೆ ಕೆಲ ಊಹಾಪೋಹಳನ್ನ ಹಬ್ಬಿಸಿ ಇದನ್ನ ಗ್ರೇಟ್ ಎಂಬ ನಿಲುವಿಗೆ ಬರುವಂತೆ ಮಾಡಿದ್ದಾರೆ. ಈ ಬಗೆಗಿನ ಕೆಲ ಸುಳ್ಳನ್ನ ನಿಜವೆಂದು ನಂಬುವಂತೆ ಮಾಡಿದ್ದಾರೆ. ಆದ್ರೆ ಅಸಲಿಗೆ ಸತ್ಯ ಬೇರೆನೇ ಇದೆ. ಹೌದು.. ಚೈನಾ ಗ್ರೇಟ್ ವಾಲ್ ಅಂತರಿಕ್ಷ / ಸ್ಪೇಸ್ ನಿಂದಲೂ ಕಾಣಿಸುತ್ತೆ ಅಂತ ಹಲವು ವರದಿಗಳು , ಆರ್ಟಿಕಲ್ ಗಳಲ್ಲಿ ಅಥವ ಊಹಾಪೋಹಗಳನ್ನ ಕೇಳಿದ್ದೇವೆ. ಆದ್ರೆ ಅಂತರಿಕ್ಷದಿಂದ ಚೀನಾ ಮಹಾಗೋಡೆ ಕಾಣಿಸುತ್ತೆ ಅನ್ನೋದು ಸುಳ್ಳು.. ಈ ವಿಚಾರವನ್ನ ಖುದ್ದು ಶಕ್ತಿಶಾಲಿ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾ ಸಾಬೀತುಪಡಿಸಿದೆ. ಅಂದ್ಹಾಗೆ ಉಪಗ್ರಗಳನ್ನ ಅಂತರಿಕ್ಷಕ್ಕೆ ಉಡಾವಣೆ ಮಾಡುವ ಮೊದಲಿನಿಂದಲೇ ಇಂತಹ ಉಹಾಪೋಹಗಳು ಹರಿದಾಡಲು ಶುರುವಾಗಿತ್ತು. ಈಗಲೂ ಕೆಲವರು ಇದನ್ನೇ ನಿಜ ಅಂತಲೂ ನಂಬಿದ್ದಾರೆ.

ಜೀನಿಯಸ್ ಐನ್ ಸ್ಟೇನ್ ಹೈ ಸ್ಕೂಲಿನ ದಿನಗಳಲ್ಲಿ ನಿಜವಾಗಲೂ ಗಣಿತದಲ್ಲಿ ಫೇಲ್ ಆಗಿದ್ರಾ..?

ಜೀನಿಯಸ್ ಐನ್ ಸ್ಟೇನ್ ಬಗ್ಗೆ ಗೊತ್ತಿಲ್ಲದವರು ಇರೋದಕ್ಕೆ ಸಾಧ್ಯವೇ ಇಲ್ಲ. ಆದ್ರೆ ಬಹುತೇಕರು ತಿಳಿದಿರುವ ಪ್ರಕಾರ ಐನ್ ಸ್ಟೇನ್ ಹೈಸ್ಕೂಲಿನ ದಿನಗಳಲ್ಲಿ ಬೇಸಿಕ್ ಮಾತ್ಸ್ / ಗಣಿತ ದಲ್ಲೂ ಪೇಲ್ ಆಗಿದ್ರು ಅಂತ ಹೇಳಲಾಗಿದೆ. ಅಥವ ಹೇಳಲಾಗ್ತಿತ್ತು. ಆದ್ರೆ ಇದು ಸುಳ್ಳು.. ಕೇವಲ 15 ವರ್ಷದವರಾಗಿದ್ದಲೇ ಐನ್ ಸ್ಟೇನ್ ಗಣಿತ ವಿಭಾಗದಲ್ಲಿ ಟಾಪ್ ಗ್ರೇಡ್ ನಲ್ಲಿದ್ದರು. ಈ ವಿಚಾರವನ್ನ ಅನೇಕ ತಜ್ಞರು ಸಹ ಸಾಬೀತು ಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd